ಸುದ್ದಿ9ಬಂಟ್ವಾಳ:ಸಮಾಜದಲ್ಲಿ ಗಾಣಿಗರು ಮಾತ್ರವಲ್ಲದೆ ಎಲ್ಲಾ ಹಿಂದುಳಿದ ವರ್ಗಗಳ ಜನತೆ ಸಂಘಟಿತರಾಗಿ ಶಿಕ್ಷಣ ಮತ್ತು ಆಥರ್ಿಕತೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಟ್ರಸ್ಟ್ ಮತ್ತಿತರ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಮಂದುವರಿದಾಗ ಮಾತ್ರ ಬಲಿಷ್ಠರಾಗಿ ಬೆಳೆಯಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ವತಿಯಿಂದ ಪಾಣೆಮಂಗಳೂರಿನ ಸುಮಂಗಲಾ ಸಮುದಾಯ ಭವನದಲ್ಲಿ ಭಾನುವಾರ (ಜು.27) ಏರ್ಪಡಿಸಿದ್ದ ವಿದ್ಯಾಥರ್ಿ ಪ್ರೋತ್ಸಾಹಧನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾಣೆಮಂಗಳೂರು ಸುಮಂಗಲಾ ಸಮುದಾಯ ಭವನ ಮತ್ತು ಸತ್ಯಶ್ರೀ ದೈವಸ್ಥಾನ ಬಳಿ ಹೈಮಾಸ್ಟ್ ದೀಪ ಅಳವಡಿಸುವುದಾಗಿ ಸಚಿವರು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ವೇಳೆ ಸುಮಾರು ರೂ 2.5ಲಕ್ಷಕ್ಕೂ ಮಿಕ್ಕಿ ಮೊತ್ತದ ವಿದ್ಯಾಥರ್ಿ ಪ್ರೋತ್ಸಾಹಧನ ವಿತರಿಸಲಾಯಿತು.
ಬಜಗೋಳಿ ಕೊಪ್ಪಲ ಶ್ರೀ ಆದಿಶಕ್ತಿ ಧರ್ಮದೇವಿ ದೇವಸ್ಥಾನ ಆಡಳಿತ ಧರ್ಮದಶರ್ಿ ಸುಧಾಕರ ಸಾಲ್ಯಾನ್, ಮುಂಬೈ ಗಾಣಿಗ ಸಂಘದ ಪ್ರಧಾನ ಕಾರ್ಯದಶರ್ಿ ಶ್ರೀನಿವಾಸ ಪಿ.ಎಸ್.ರಾಯಿ, ಬಾಲಪ್ರತಿಭೆ ಕುಮಾರ್ ಸಾಗರ್ ಎಂ. ಉಪ್ಪಿನಂಗಡಿ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಸುಮಂಗಲಾ ಕ್ರೆಡಿಟ್ ಸೊಸೈಟಿ ನಿದರ್ೇಶಕ ಮೋಹನ್ ಕೆ.ಶ್ರೀಯಾನ್ ರಾಯಿ ಸನ್ಮಾನಿತರನ್ನು ಪರಿಚಯಿಸಿದರು.
ಸನ್ಮಾನಿತರ ಪೈಕಿ ಶ್ರೀನಿವಾಸ ಪಿ.ಎಸ್.ರಾಯಿ ಇವರು ಸಂಘದ ವಿದ್ಯಾನಿಧಿಗೆ ರೂ. 1 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು.
ಉದ್ಯಮಿಗಳಾದ ಎ.ಕೆ.ಸುಂದರ ಸಾಲ್ಯಾನ್, ಜನಾರ್ದನ ಸಪಲ್ಯ ಅಕರ್ುಳ, ವಿಶ್ವಾಸ್ಕುಮಾರ್ ದಾಸ್, ಡಾ.ದಿನೇಶ ಬಂಟ್ವಾಳ್, ತಾ.ಪಂ.ಸದಸ್ಯ ಮಾಧವ ಎಸ್.ಮಾವೆ, ಜಿಲ್ಲಾ ಸಂಘದ ಪ್ರಧಾನ ಕಾರ್ಯದಶರ್ಿ ತಾರನಾಥ ಸುವರ್ಣ, ಕರಾವಳಿ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಎ.ಎಸ್.ವೆಂಕಟೇಶ್, ಉಪಾಧ್ಯಕ್ಷ ರಮೇಶ ಮೆಂಡನ್ ಮತ್ತಿತರರು ಶುಭ ಹಾರೈಸಿದರು.
ಉಪನ್ಯಾಸಕ ನಂದಕಿಶೋರ್ ಎಸ್. ಮತ್ತು ಚಂದ್ರಶೇಖರ ಎಡಪದವು ಇವರಿಂದ ‘ಶೈಕ್ಷಣಿಕ ಮತ್ತು ವಿದ್ಯಾಥರ್ಿವೇತನ’ ಬಗ್ಗೆ ಮಾಹಿತಿ ಕಾಯರ್ಾಗಾರ ನಡೆಯಿತು.
ಸಂಘದ ಪ್ರಧಾನ ಕಾರ್ಯದಶರ್ಿ ವೇದವ ಗಾಣಿಗ, ಪದಾಧಿಕಾರಿಗಳಾದ ವಸಂತಿ ಗಂಗಾಧರ್, ಪೂವಪ್ಪ ದರಿಬಾಗಿಲು, ಈಶ್ವರ ಮೆಲ್ಕಾರ್, ಬಂಟ್ವಾಳ ಕಸಾಪ ಅಧ್ಯಕ್ಷ ಜಯಾನಂದ ಪೆರಾಜೆ, ಕೆಡಿಪಿ ಸದಸ್ಯ ಉಮೇಶ ಬೋಳಂತೂರು, ಪ್ರಮುಖರಾದ ನರ್ಸಪ್ಪ ಅಮೀನ್, ಪುರುಷೋತ್ತಮ ಟೈಲರ್, ಎಂ.ಎನ್.ಕುಮಾರ್, ವಿಶ್ವನಾಥ ಎಸ್.ಎ., ವಿಠಲ ಸಪಲ್ಯ ವಿಟ್ಲ, ಪದ್ಮನಾಭ ಪಜೀರು ಮತ್ತಿತರರು ಇದ್ದರು.
ಸಂಘದ ಜೊತೆ ಕಾರ್ಯದಶರ್ಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿ, ಅಶೋಕ ಬರಿಮಾರು ವಂದಿಸಿದರು.
ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
—
