ಬಂಟ್ವಾಳ: ಹಿಂದೂ ಯುವಸೇನೆ ಬಂಟ್ವಾಳ ತಾಲೂಕು ಘಟಕ ಇದರ ಆಶ್ರಯದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್(ರಿ), ಮಂಗಳೂರು ಮತ್ತು ಯು.ಎಂ.ಸಿ. ಬ್ಲಡ್ ಬ್ಯಾಂಕ್, ಮಂಗಳೂರು ಇದರ ಸಹಕಾರದೊಂದಿಗೆ 1ನೇ 5ವರ್ಷದ ಕಾರ್ಗಿಲ್ ವಿಜಯದ ಸವಿನೆನಪಿನಲ್ಲಿ 12ನೆ ಬಾರಿಯ ರಕ್ತದಾನ ಶಿಬಿರವು ಜುಲೈ 27ನೇ ರವಿವಾರ ಬೆಳಿಗ್ಗೆ ಬಂಟ್ವಾಳ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸರ್ಕಲ್ ಇನ್ಸ್ಪೆಕ್ಟರ್ ಕೆ.ಯು.ಬೆಳಿಯಪ್ಪ ಉದ್ಘಾಟಿಸಿ ಮಾತನಾಡಿದರು. ಪುರಸಭಾ ಸದಸ್ಯ ಗೋವಿಂದ ಪ್ರಭು, ಬಂಟ್ವಾಳ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೋಕ್ತೇಸರ ಅರಳ ದಾಮೋದರ ಪ್ರಭು, ಸದ್ಘುರು ಸ್ಟೀಲ್ ಪ್ಯಾಕ್ಟರಿಯ ಮಾಲಕರಾದ ಮಾಹಾಬಲ ಸಪಲ್ಯ, ಕೆ.ಎಂ.ಸಿ ಯ ವೈದ್ಯಾಧಿಕಾರಿ ಡಾ|ರೋಹಿತ್, ಹಿಂದೂ ಯುವಸೇನೆ ಬಂಟ್ವಾಳ ತಾಲೂಕು ಘಟಕ ಇದರ ಗೌರಾವಾಧ್ಯಕ್ಷ ಮುರಳೀದರ ಭಟ್ಟ್, ಹಿಂದೂ ಯುವಸೇನೆ ಬಂಟ್ವಾಳ ತಾಲೂಕು ಘಟಕ ಇದರ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದರು. ವಸಂತ ಕುಮಾರ್ ಕೊಂಗ್ರಬೆಟ್ಟು ಸ್ವಾಗತಿಸಿ,ಗೋಪಾಲ ಭಂಡಾರಿ ವಂದಿಸಿದರು. ಮಂಜುನಾಥ ದಡ್ಡಲಕಾಡು ಕಾರ್ಯಕ್ರಮ ನಿರೂಪಿಸಿದರು

