ಬಂಟ್ವಾಳ : ಬಂಟ್ವಾಳ-ಮೂಡಬಿದಿರೆ ರಸ್ತೆಯಲ್ಲಿ ಕೊಯಿಲದ ಕುದ್ಮಣಿ ಎಂಬಲ್ಲಿ ಬೃಹತ್ ಆಲದಮರವೊಂದು ರಸ್ತೆಗೆ ಬಿದ್ದು ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

ಬಹಳ ಹಳೆಯ ಈ ಆಲದಮರ ಬೆಳಗ್ಗೆ 9ಘಂಟೆಯ ಸುಮಾರಿಗೆ ರಸ್ತೆಗೆ ಅಡ್ಡವಾಗಿ ಧರೆಗುರುಳಿತ್ತು.ಇದರಿಂದ ರಸ್ತೆ ತಡೆ ಉಂಟಾಗಿ ವಾಹನ ಸಂಚಾರಕ್ಕೆ ತೊಡಕಾಯಿತು. ಮರ ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿದ್ದು 2 ಕಂಬಗಳಿಗೆ ಹಾನಿಯಾಗಿದೆ. ಸುಮಾರು ಒಂದೂವರೆ ತಾಸು ವಾಹನ ಸಂಚಾರ ಸ್ಥಗಿತಗೊಡಿತ್ತು.ಈ ಹೊತ್ತಿನಲ್ಲಿ ಶಾಲಾ ಕಾಲೇಜುಗಳಿಗೆ,ಕಚೇರಿಗಳಿಗೆ ತೆರಳುವವರಿಗೆ ಇದರಿಂದ ತೊಮದರೆ ಅನುಭವಿಸಬೇಕಾಯಿತು.ಮರ ಬಿದ್ದ ಸ್ಥಳದಲ್ಲಿ ಕೆಲವೇ ಸಮಯದ ಹಿಂದೆ ಶಾಲಾ ವಿದ್ಯಾಥರ್ಿಗಳು ಬಸ್ಗಾಗಿ ಕಾದು ನಿಂತಿದ್ದು ಬಸ್ನಲ್ಲಿ ಹೋಗಿದ್ದರು.ಆದುದರಿಂದ ಅವಘಡವೊಂದು ತಪ್ಪಿದಂತಾಗಿದೆ.
ಬಳಿಕ ಸ್ಥಳೀಯರಾದ ಪ್ರಕಾಶ್ ಜೈನ್ ಅವರ ಸಹಕಾರದಲ್ಲಿ ಯಂತ್ರಗರಗಸದ ಮೂಲಕ ಮರ ಕತ್ತರಿಸಿ ರಸ್ತೆತೆರವುಗೊಳಿಸಲಾಯಿತು.ಆ ವೇಳೆ ಆ ರಸ್ತೆಯಲ್ಲಿ ಸಾಗುತ್ತಿದ್ದ ಕ್ರೇನ್ ಸಹಾಯದಿಂದ ಮರದ ದೊಡ್ಡ ತುಂಡುಗಳನ್ನು ರಸ್ತೆ ಬದಿ ಸರಿಸಲಾಯಿತು.ತಾ.ಪಂ.ಸದಸ್ಯ ವಸಂತ ಕುಮಾರ್ ಅಣ್ಣಳಿಕೆ,ಗ್ರಾ.ಪಂ.ಸದಸ್ಯ ಪ್ರಶಾಂತ್ ಶೆಟ್ಟಿ ,ಪರಮೇಶ್ವರ ರಾಯಿ,ಶರತ್ ಕೊಯಿಲ ಮತ್ತಿತರರು ಸಹಕರಿಸಿದ್ದರು. ಅರಣ್ಯ ಮತ್ತು ಮೆಸ್ಕಾಂ ಸಿಬಂದಿಗಳು ಸ್ಥಳಕ್ಕಾಗಮಿಸಿದ್ದರು.
