ಕಲ್ಲಡ್ಕ:ರಾಷ್ಟೀಯಯೋಗ ದಿನಾಚರಣೆ ಜೂ.21 ರಂದುರಾಷ್ಟೀಯಯೋಗ ದಿನಾಚರಣೆಯ ಪ್ರಯುಕ್ತಕ್ರೀಡಾಘಟಕದ ವತಿಯಿಂದ ಶ್ರೀರಾಮ ಪದವಿಪೂರ್ವಕಾಲೇಜ್‍ಕಲ್ಲಡ್ಕದಲ್ಲಿರಾಷ್ಟೀಯಯೋಗ ದಿನಾಚರಣೆಯನ್ನುಆಚರಿಸಲಾಯಿತು.ಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಸದಸ್ಯೆಯಾದ ಮಲ್ಲಿಕಾ ಶೆಟ್ಟಿ ಉದ್ಘಾಟಿಸಿದರು.
ಮುಖ್ಯಅತಿಥಿಯಾಗಿ ಆಗಮಿಸಿದ ಆರ್ಟ್‍ಆಫ್ ಲಿವಿಂಗ್ ನ ಸದಸ್ಯರಾದಜೆ ಕೆ ರಾಘವರವರು ಉಪಸ್ಥಿತರಿದ್ದರು. ಪದವಿ ಪೂರ್ವಕಾಲೇಜಿನಉಪನ್ಯಾಸಕಿ ವಿಲಾಸಿನಿ ಮಾತಾಜಿಯವರು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅನುಷಾ ಆನಂದ್‍ರವರು ಯೋಗದ ಪ್ರಾಮುಖ್ಯತೆ ಹಾಗೂ ಸೂಕ್ಷ್ಮ ವ್ಯಾಯಾಮಗಳ ಆಸನಗಳನ್ನು ಪ್ರದರ್ಶಿಸಿದರು.ಕ್ರೀಡಾಘಟಕದ ಮುಖ್ಯಸ್ಥರಾದ ಕರುಣಾಕರ ಶ್ರೀಮಾನ್ ಕಾರ್ಯಕ್ರಮವನ್ನು ನಿರ್ವಹಿಸಿ,ಇತಿಹಾಸ ಉಪನ್ಯಾಸಕರಾದ ತಿರುಮಲೇಶ್ವರ ಪ್ರಶಾಂತ್ ರವರು ವಂದಿಸಿದರು.
