ಬೆಂಗಳೂರು: ಭಾರತದ ನಂ.1 ರೇಡಿಯೋ ನೆಟ್‍ವರ್ಕ್ ಆಗಿರುವ ಬಿಗ್ ಎಫ್‍ಎಂ ಸತತ ನಾಲ್ಕು ವರ್ಷಗಳಿಂದ ‘ಬಿಗ್ ಗೋಲ್ಡನ್ ವಾಯ್ಸ್’ ರಿಯಾಲಿಟಿ ಸಂಗೀತ ಕಾರ್ಯಕ್ರಮದ ಮೂಲಕ ಯಶಸ್ಸನ್ನು ಸಾಧಿಸುತ್ತಾ ಬಂದಿದೆ. ಈ ವರ್ಷ ಚಿಕ್ಕ ಮಕ್ಕಳಿಗಾಗಿ ವೇದಿಕೆ ಕಲ್ಪಿಸಿಕೊಟ್ಟಿದೆ. ‘ಬಿಗ್ ಗೋಲ್ಡನ್ ವಾಯ್ಸ್ ಜೂನಿಯರ್’ ಸೀಸನ್ 1 ಎಂಬ ಹೆಸರಿನಲ್ಲಿ ಪ್ರತಿಭಾ ಶೋಧನೆಗೆ ಅವಕಾಶ ಮಾಡಿಕೊಟ್ಟಿದೆ 14 ವರ್ಷದ ಒಳಗಿನ ಮಕ್ಕಳಿಗಾಗಿ ಈ ಸರಣಿಯನ್ನು ನಿರ್ಮಿಸಿಕೊಡಲಾಗಿದೆ. ರೇಡಿಯೋ ಆಧಾರಿತ ಮಕ್ಕಳ ಪ್ರತಿಭಾನ್ವೇಷಣೆಯ ಈ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಬೆಂಗಳೂರಿನ ಶ್ರೇಯಾ ರಾವ್ ಅವರ ಹೆಸರನ್ನು ಘೋಷಿಸಲಾಯಿತು.

Sreya Rao City winner of BIG Golden Voice Junior in Bengalore by 92.7 BIG FM_2

ಬಿಗ್ ಎಫ್‍ಎಂ ತಮ್ಮ ಬಿಗ್ ಗೋಲ್ಡನ್ ವಾಯ್ಸ್ ಜೂನಿಯರ್ ಕಾರ್ಯಕ್ರಮವನ್ನು ಉದ್ಘಾಟಿಸುವುದರ ಜತೆಗೆ ಹಾಡುಗಾರಿಕೆಯಲ್ಲಿ ಪ್ರತಿಭೆ ಇರುವ ಮಕ್ಕಳಿಗೆ ಈ ಕಾರ್ಯಕ್ರಮದ ಮೂಲಕ ಒಂದು ಉತ್ತಮವಾದ ವೇದಿಕೆಯನ್ನು ಒದಗಿಸುತ್ತಿದೆ. ಈ ಸಂಗೀತ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹಿನ್ನೆಲೆ ಗಾಯಕಿಯಾದ ಅನುರಾಧಾ ಭಟ್ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು. ಸಾಕಷ್ಟು ಸ್ಪರ್ಧಿಗಳಿದ್ದ ಇದರಲ್ಲಿ ಬೆಂಗಳೂರಿನ 13 ವರ್ಷದ ಶ್ರೇಯಾ ರಾವ್ ಅವರು ಸಿಟಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ‘ಬಿಗ್ ಗೋಲ್ಡನ್ ವಾಯ್ಸ್ ಜೂನಿಯರ್’ ಪ್ರತಿಷ್ಠಿತ ಪ್ರಶಸ್ತಿಯ ಅಂತಿಮ ಸುತ್ತಿಗೆ 40 ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಶ್ರೇಯಾ ಅವರು ಜಯಶಾಲಿಯಾದರೆ ಅವರಿಗೆ ಬಾಲಿವುಡ್‍ನಲ್ಲಿ ಹಾಡುವ ಸುವರ್ಣ ಅವಕಾಶ ದೊರೆಯಲಿದೆ.Anuradha Bhat at BIG Golden Voice Junior in Bengalore by 92.7 BIG FM

‘ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನ್ನ ತಾಯಿ ಮತ್ತು ಸ್ನೇಹಿತರು ನನ್ನ ಧ್ವನಿಯ ಮುದ್ರಿಕೆಯನ್ನು ಕಳುಹಿಸಲು ಪ್ರೋತ್ಸಾಹಿಸಿದರು. ಇದರಿಂದ ಆಡಿಷನ್ ಸುತ್ತನ್ನು ಮುಗಿಸಿದೆ. ಕೆಲವು ಕಠಿಣ ಸುತ್ತುಗಳನ್ನು ಎದುರಿಸಿ ನಂತರ ನಾನು ಈ ಹಂತಕ್ಕೆ ತಲುಪಿದ್ದೇನೆ. ಇದರಿಂದ ನನಗೆ ತುಂಬ ಖುಷಿಯಾಗುತ್ತಿದೆ. ನನ್ನ ಪಾಲಿಗೆ ಇದೊಂದು ರೀತಿ ಆಶ್ಚರ್ಯಕರವಾದ ಗೆಲುವಾಗಿದೆ. ತುಂಬಾ ಒಳ್ಳೆಯ ಸ್ಪರ್ಧಿಗಳಿದ್ದರು ಹಾಗಾಗಿ ನಾನು ಈ ಗೆಲುವನ್ನು ನಿರೀಕ್ಷಿಸಿರಲಿಲ್ಲ. ನನ್ನ ಗೆಲುವಿನಿಂದ ನನ್ನ ತಂದೆ-ತಾಯಿ ಕೂಡ ತುಂಬ ಖುಷಿಯಾಗಿದ್ದಾರೆ. ನನ್ನ ಸ್ನೇಹಿತರು, ಸಂಗೀತ ಗುರುಗಳು ನನಗೆ ಅಭಿನಂದಿಸಿದ್ದಾರೆ’ ಎಂದು ಶ್ರೇಯಾ ರಾವ್ ತಮ್ಮ ಖುಷಿಯನ್ನು ಹಂಚಿಕೊಂಡರು.

BIG Golden Voice Junior in Bengalore by 92.7 BIG FM (2)

Runner up receiving at BIG Golden Voice Junior in Bengalore by 92.7 BIG FM

BIG Golden Voice Junior in Bengalore by 92.7 BIG FM

BIG Golden Voice Junior in Bengalore by 92.7 BIG FM_Photo92.7 ಬಿಗ್ ಎಫ್‍ಎಂನ ಸಹಭಾಗಿತ್ವದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನುರಾಧ ಭಟ್ ಅವರು ಈ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತನಾಡಿದರು. ‘ಭಾರತದಲ್ಲಿ ಸಾಕಷ್ಟು ಯುವ ಪ್ರತಿಭಾವಂತರು ಇದ್ದಾರೆ. ಮಕ್ಕಳಿಗೆ ಒಂದು ಉತ್ತಮವಾದ ವೇದಿಕೆ ಕಲ್ಪಿಸಿಕೊಡುವುದರ ಮೂಲಕ ಅವರ ಕನಸನ್ನು ನನಸು ಮಾಡಿಕೊಳ್ಳಲು ನಾವು ಪ್ರೋತ್ಸಾಹಿಸಬೇಕು. ಗೆಲುವಿನ ಪಟ್ಟವನ್ನು ಮುಡಿಗೇರಿಸಿಕೊಳ್ಳಲು ಕೇವಲ ಒಂದು ಹೆಜ್ಜೆ ಬಾಕಿ ಇದೆ. ಶ್ರೇಯಾಳನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಮುಂದಿನ ಹಂತದಲ್ಲೂ ಅವಳು ಯಶಸ್ಸನ್ನು ಗಳಿಸಲಿ ಎಂದು ಹಾರೈಸುತ್ತೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ’ ಅನುರಾಧಾ ಭಟ್ ತಿಳಿಸಿದರು.

By Suddi9

Leave a Reply

Your email address will not be published. Required fields are marked *