ಬಂಟ್ವಾಳ ತಾಲ್ಲೂಕಿನ ಕೆಥೋಲಿಕ್ ಸಭಾ ವಲಯ ಸಮಿತಿ ವತಿಯಿಂದ ಮೊಡಂಕಾಪುವಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 90ಕ್ಕಿಂತಲೂ ಮಿಕ್ಕಿ ಅಂಕ ಗಳಿಸಿದ 27 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಭಾನುವಾರ ಸನ್ಮಾನಿಸಲಾಯಿತು. ರಾಷ್ಟ್ರೀಯ ನಿರ್ದೇಶಕ ಧರ್ಮಗುರು ಪಾವುಸ್ತಿನ್ ಲೋಬೊ, ಧರ್ಮಗುರು ಮ್ಯಾಕ್ಸಿಂ ನೊರೊನ್ಹಾ, ವಲಯಾಧ್ಯಕ್ಷ ಸ್ಟೇನಿ ಲೋಬೊ, ನಿಯೋಜಿತ ಅಧ್ಯಕ್ಷ ಆಲ್ವಿನ್ ಮೋನಿಸ್, ಅನಿತಾ ನೊರೊನ್ಹಾ, ಫ್ರಾನ್ಸಿಸ್ ಡೇಸಾ, ಆಶಾ ಫೆರ್ನಾಂಡಿಸ್ ಮತ್ತಿತರರು ಇದ್ದರು.

