ಬಂಟ್ವಾಳ : ಕಳೆದೆರಡು ದಿನಗಳಿಂದರಾಜ್ಯದಾದ್ಯಂತ ಸಂಚಲನ ಮೂಡಿಸಿರುವ ಸಚಿವ ರಮಾನಾಥ ರೈ ಅವರು ಎಸ್ಪಿಯವರೊಂದಿಗಿನ ಸಂಭಾಷಣೆಯ ವೀಡಿಯೋ ತುಣುಕಿನ ಕುರಿತಂತೆ ಮೌನ ಮುರಿದಿರುವ ಬಂಟ್ವಾಳ ಕ್ಷೇತ್ರ ಸಮಿತಿಯ ಮುಖಂಡರು ಮಂಗಳವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜಕೀಯ ದುರುದ್ದೇಶದಿಂದ ಯಾವುದೇ ಕಳಂಕವಿಲ್ಲದ ಸಚಿವ ರೈಯವರ ಹೆಸರಿಗೆ ಕಪ್ಪು ಮಸಿ ಬಳಿಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಅವರು,ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ,ಶಾಂತಿ,ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದಾರೆ ಇದನ್ನೇ ದೊಡ್ಡ ಸಂಗತಿ ಮಾಡುವುದು ಸರಿಯಲ್ಲ ಎಂದು ಸಮರ್ಥಿಸಿದರು.IMG_20170620_113500372

* ಬಂಧಿಸಲು ಹೇಳಿಲ್ಲ:

ಹಾಗೇಯೇ ಸಾಮಾಜಿಕ ಮುಖಂಡ ಹರಿಕ್ರಷ್ಣ ಬಂಟ್ವಾಳ ಅವರು ನೀಡಿರುವ ಹೇಳಿಕೆಯಂತೆ ನೇತ್ರಾವತಿ ಹೋರಾಟಗಾರರನ್ನು ಬಂಧಿಸುವಂತೆಯು ಸಚಿವ ರೈ ಯವರು ಎಲ್ಲಿಯು ಹೇಳಿಲ್ಲ ಎಂದು ಸ್ಷಷ್ಟ ಪಡಿಸಿದ ಅವರು,ಬಿಜೆಪಿ ಅಧಿಕಾರದಲ್ಲಿದ್ದಾಗ ಈಯೋಜನೆ ಜಾರಿಗೆ ಬಂದಿದೆ.೨೪ ರಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರು ಬಿ.ಸಿ.ರೋಡಿಗೆ ಬಂದಾಗ ಅವರಲ್ಲಿಯೇ ಪ್ರಶ್ನಿಸಲಿ ಎಂದರು.

* ಡಾ.ಭಟ್ ಕೊಡುಗೆ ಏನು ? :

ಸುದ್ದಿಗೋಷ್ಠಿಯುದ್ದಕ್ಕೂ ಕಲ್ಲಡ್ಕ ಡಾ.ಪ್ರಭಾಕರ ಭಟ್ ವಿರುದ್ದ ಹರಿಹಾಯ್ದ ಚಂದ್ರಪ್ರಕಾಶ್ ಶೆಟ್ಟಿ ಪ್ರಚೋದನಾಕಾರಿ ಭಾಷಣಗೈದ ಆರೋಪದಲ್ಲಿ ಜಿಲ್ಲೆಯ ವಿವಿದೆಡೆ ಅವರ ವಿರುದ್ದ ಪ್ರಕರಣಗಳಿವೆ. ಅವರ ಹಿಂದೆ ಶೇ.೧೫ ರಷ್ಟು ಮಾತ್ರ ಕ್ರಿಮಿನಲ್ ಹಿನ್ನಲೆಯ ಹಿಂದು ಯುವಕರಿದ್ದಾರೆ.ಡಾ.ಭಟ್ ಅವರು ಹಿಂದು ಸಮಾಜಕ್ಕೆ ಕೊಟ್ಟಿರುವ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದ ಅವರು,ಸಚಿವ ರೈ ಅವರು,ದೇವಸ್ಥಾನ,ದೈವಸ್ಥಾನ,ಮಂದಿರ,ಮಸೀದಿ ,ಚಚ್೯ಗಳಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ,ಹಾಗೆಯೇ ಸರಕಾರದಿಂದಲೂ ನೆರವು ಒದಗಿಸಿದ್ದಾರೆ ಎಂದರು.

* ಸಿಐಡಿ ತನಿಖೆಗೆ ಒತ್ತಾಯ :

ಇತ್ತೀಚೆಗೆ ನಡೆದ ಬಂಟ್ವಾಳದ ಹರೀಶ್ ಪೂಜಾರಿ, ಕರೋಪಾಡಿ ಪಂ.ಉಪಾಧ್ಯಕ್ ಜಲೀಲ್ ಕೊಲೆ ಸಹಿತ ತಾಲೂಕಿನಲ್ಲಾಗಿರುವ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ಮರು ತನಿಖೆಗಾಗಿ ಸಿಐಡಿಗೆಒಪ್ಪಿಸಬೇಕು ಎಂದು ಸರಕಾರವನ್ನು ಈಸಂದರ್ಭದಲ್ಲಿ ಒತ್ತಾಯಿಸಿದರು.ಈ ಎಲ್ಲಾ ಕೊಲೆ ಪ್ರಕರಣದ ಬಗ್ಗೆ ಮರು ತನಿಖೆಯಾದಲ್ಲಿ ಇದರಲ್ಲಿ ಯಾರೆಲ್ಲಾ ಶಾಮೀಲಾಗಿದ್ದಾರೆ.ಯಾರ ಕೈವಾಡವಿದೆ ಎಂಬ ಸತ್ಯಾಂಶ ಬಯಲಿಗೆ ಬರಲಿದೆ ಎಂದ ಅವರು,ಸಚಿವರಿಗೆ ಕೋಮು ದ್ವೇಷ ಹಬ್ಬಿಸಿ ಚುನಾವಣೆಯ ಲಾಭ ಪಡೆಯಬೇಕಾಗಿಲ್ಲ,ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವ್ರದ್ದಿ ಕಾರ್ಯಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತೆವೆ ಎಂದರು.

ಅಜೆಂಡಾ ಇಲ್ಲ :

ಮುಂದಿನ ಚುನಾವಣೆಗೆ ಬಂಟ್ವಾಳದಲ್ಲಿ ಬಿಜೆಪಿಯವರಿಗೆ ಯಾವುದೇ ಅಜೆಂಡಾ ಇಲ್ಲ ,ಇದನ್ನೇ ದೊಡ್ಡ ರದ್ದಾಂತ ,ಅಪಪ್ರಚಾರದ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದ ಅವರು,ಮುಂಬೈ ಅಥವಾ ಅಮೇರಿಕಾದಿಂದಲೇ ಬೆದರಿಕೆ ಕರೆ ಬರಲಿ ಕಾಂಗ್ರೆಸ್ ಕಾರ್ಯಕರ್ತರು ಯಾರೂ ಜಗ್ಗುವುದಿಲ್ಲ,ಬಗ್ಗುವುದಿಲ್ಲ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.ಸಚಿವರ ಹಾಗೂ ಎಸ್ಪಿಯವರ ಸಂಭಾಷಣೆಗೆ ಸಂಬಂಧಿಸಿ ಒಟ್ಟು ೪ ವೀಡಿಯೋ ಕ್ಲಿಪ್ಪಿಂಗ್ ಇದೆ.

ಆದರೆ ನಿರ್ಧಿಷ್ಠ ಒಂದು ಕ್ಳಿಪ್ಪಿಂಗ್ ಬಹಿರಂಗವಾಗಿರುವುದಕ್ಕೆ ಕಾಂಗ್ರಸ್ ಒಳಜಗಳ ಕಾರಣವೇ ಎಂಬುದನ್ನು ಅಲ್ಲಗಳೆದ ಚಂದ್ರಪ್ರಕಾಶ ಶೆಟ್ಟಿ ನಾವೆಲ್ಲರೂ ಒಗ್ಗಟ್ಟಿನಲ್ಲಿದ್ದೆವೆ,ಯಾವುದೇ ಒಡಕು ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯ ಪದ್ಮಶೇಖರ ಜೈನ್,ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್,ತಾಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಪುರಸಭಾಧ್ಯಕ್ಷ ರಾಮಕ್ರಷ್ಣ ಆಳ್ವ,ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಗೇರು ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಯುವ ಕಾಂಗ್ರಸ್ ಅಧ್ಯಕ್ಷ ಪ್ರಶಾಂತ ಕುಲಾಲ್,ಎಸ್ಎಸ್ಸಿ ಮೋರ್ಚಾ ಪ್ರಮುಖ ಜನಾರ್ಧನ ಚಂಡ್ತಿಮಾರ್, ಮಾಲಿನ್ಯ ಮಂಡಳಿ ನಿರ್ದೇಶಕ ಪಿಯೂಸ್ ಎಲ್ ರೋಡ್ರಿಗಸ್, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ,ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಮೊದಲಾದವರಿದ್ದರು.

By Suddi9

Leave a Reply

Your email address will not be published. Required fields are marked *