ಬಂಟ್ವಾಳ: ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ರೋಟರಿಕ್ಲಬ್ ಬಂಟ್ವಾಳ ಇದರ ಆಶ್ರಯದಲ್ಲಿ ಜ. ಕೆ.ಎಸ್.ಹೆಗ್ಡೆ ಚಾರೀಟೇಬಲ್ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ 92ನೇ ರಕ್ತದಾನ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಮಂಗಳವಾರ ನಡೆಯಿತು.ಪ್ರೊಬೇಷನರಿ ಸಹಾಯಕ ಪೊಲೀಸ್ ಅಧೀಕ್ಷಕ ನಾಗೇಶ್ ಡಿ.ಎಲ್. ಶಿಬಿರ ಉದ್ಘಾಟಿಸಿ ಸ್ವಯಂ ರಕ್ತದಾನ ಮಾಡಿದರು. ಅವರು ಮಾತನಾಡಿ ಜೀವನದಲ್ಲಿ ಮೊದಲ ಭಾರಿಗೆ ರಕ್ತದಾನ ಮಾಡುತ್ತಿದ್ದೇನೆ. ಈ ಅವಕಾಶವನ್ನು ಕೊಟ್ಟ ಸೇವಾಂಜಲಿ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಒಂದು ಬಾರಿ ರಕ್ತದಾನ ಮಾಡುವುದರಿಂದ ನಾಲ್ಕು ಮಂದಿಯ ಪ್ರಾಣ ಉಳಿಸಲು ಸಾಧ್ಯವಿದೆ. ಇಂದಿನ ಸ್ವಾರ್ಥಪರ ಸಮಾಜದಲ್ಲಿ ಇಂತಹ ಶಿಬಿರಗಳು ನಿಜಕ್ಕೂ ಮಾದರಿ ಕಾರ್ಯ ಎಂದರು.

BTW_JUNE13_1
ನರಿಕೊಂಬು ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕಾರಂತ ಮಾತನಾಡಿ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡಬಹುದಾಗಿದ್ದು ಇದರಿಂದ ನಮ್ಮ ಆರೋಗ್ಯ ಸುಧಾರಣೆಯ ಜೊತೆಗೆ ಮತ್ತೊಬ್ಬರಿಗೂ ಪ್ರಾಣ ದಾನ ಮಾಡಬಹುದಾಗಿದೆ ಎಂದರು. ರೋಟರಿ ಕ್ಲಬ್‍ನ ನಿಯೋಜಿತ ಕಾರ್ಯದರ್ಶಿ ಕೆ. ನಾರಾಯಣ ಹೆಗ್ಡೆ, ನಿಯೋಜಿತ ಕಾರ್ಯದರ್ಶಿ ಪ್ರಕಾಶ್ ಬಾಳಿಗ, ಕೆ. ಎಸ್ ಹೆಗ್ಡೆ ಆಸ್ಪತ್ರೆಯ ಡಾ. ರಂಜಿತ್ ಶೆಟ್ಟಿ, ಬ್ಲಡ್ ಬ್ಯಾಂಕಿನ ಕೃತಿ ಆಳ್ವ ವೇದಿಕೆಯಲ್ಲಿ ಉಪಸ್ಥಿರಿದ್ದರು.
ಮೆಸ್ಕಾಂ ಸಹಾಯಕ ಇಂಜಿನಿಯರ್ ರಾಜಶೇಖರ್, ಸೇವಾಂಜಲಿ ಟ್ರಸ್ಟಿಗಳಾದ ಪುಂಚಮೆ ಪದ್ಮನಾಭ ಶೆಟ್ಟಿ, ಭಾಸ್ಕರ ಚೌಟ, ಪ್ರಕಾಶ್ ಕಿದೆಬೆಟ್ಟು, ನಾರಾಯಣ ಬಿ., ಪ್ರಶಾಂತ್ ಕುಮಾರ್ ತುಂಬೆ, ಸುಕುಮಾರ್ ಬಿ., ಸುಖೇಶ್ ಶೆಟ್ಟಿ ತೇವು, ಲೋಕೆಶ್ ಕಲ್ಲತಡಮೆ, ಜೇಸಿಐ ಕಾರ್ಯದರ್ಶಿ ಸದಾನಂದ ಬಂಗೇರ ಹಾಜರಿದ್ದರು.

By suddi9

Leave a Reply

Your email address will not be published. Required fields are marked *