ಇವರು ಗ್ರಾಮೀಣ ಪ್ರದೇಶದಲ್ಲಿ ಅರಳಿದ ರಂಗಪ್ರತಿಭೆ. ಐಟಿಐ ಓದಿರುವ ಇವರು ಏರ್‍ಪೋರ್ಟ್ ಏಸಿ ಕಚೇರಿಯಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಉಪ-ಕಸುಬಾಗಿ ವೀಟು-ಡೆಕೊರೇಟರ್ಸ್, ವೀಟು-ಕ್ಯಾಟರಿಂಗ್ಸ್ ಸಂಚಾಲನೆ ಹಾಗೂ ಇಲೆಕ್ಟ್ರಾನಿಕ್ಸ್ ತಂತ್ರಜ್ಞಾನ ಹೊಂದಿದ್ದಾರೆ. ಇವರು ಹೈಸ್ಕೂಲ್ ದಿನಗಳಿಂದಲೇ ರಂಗಾಸಕ್ತಿ ಬೆಳೆಸಿಕೊಂಡಿದ್ದರು. ಹನಿಗವನ, ಕತೆ ಹಾಗೂ ಲೇಖನ ಬರೆಯುತ್ತಿರುವ ಪ್ರಶಾಂತ್ ತುಳು ರಂಗಭೂಮಿಯತ್ತ ಹೆಚ್ಚಿನ ಒಲವು ಹರಿಸಿದ್ದಾರೆ. ವಿಶೇಷ ಕಾರ್ಯಕ್ರಮಗಳ ಪ್ರಭಾವಳಿ ರೂಪಕ-ನಿರ್ದೇಶನ ಮಾಡುತ್ತಿರುವ ಇವರು ಉಪ್ಪುಗೂಡು ವಜ್ರದೇಹಿ ಮಠವೆಂಬ ಗರಡಿಯಡಿಯಲ್ಲಿ ತನ್ನ ಸಾಹಿತ್ಯ ಕೃಷಿ ಮಾಡಿಕೊಂಡು ಬಂದಿದ್ದು, ಇದಕ್ಕೆ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಯ ನಿರಂತರ ಬೆಂಬಲ ಸಿಗುತ್ತಿದೆ.

s-1

vajra-2

ತುಳುವಿನಲ್ಲಿ ವಜ್ರದೇಹಿ ಮಠದ ಹಿನ್ನೆಲೆಯುಳ್ಳ `ಪುಣ್ಯೊದ ಮಣ್ಣ್’ ಇವರು ಬರೆದಿರುವ ಚೊಚ್ಚಲ ಸಾಹಿತ್ಯ ಕೃತಿಯಾಗಿದೆ. `ಪೊಣ್ಣ ನಿಚ್ಚಯ’ ಹಾಗೂ ಇತರ ಕೆಲವು ನಾಟಕ ಕೃತಿ ಬರೆದಿದ್ದಾರೆ. “ತುಳು ಭಾಷೆಯ ಮೇಲಿನ ಪ್ರೀತಿ ತುಳು ರಂಗಭೂಮಿಯತ್ತ ನೋಡುವಂತೆ ಮಾಡಿದೆ. ಶ್ರಮ ಮತ್ತು ಸಾಧನೆವೊಂದಿದ್ದರೆ ತುಳು ರಂಗಭೂಮಿಯಲ್ಲಿ ಗಟ್ಟಿ ನೆಲೆ ಕಾಣಲು ಸಾಧ್ಯವಿದೆ ”ಎಂದು ವಿಶ್ವಾಸ ವ್ಯಕ್ತಪಡಿಸಿರುವ ಪ್ರಶಾಂತ್, “ಪ್ರೇಕ್ಷಕರ ಬೆಂಬಲ ಇದ್ದರೆ ಈ ಕ್ಷೇತ್ರದಲ್ಲಿ ಅರ್ಧ ಗೆದ್ದಂತೆ” ಎಂದಿದ್ದಾರೆ. ಈ ನಿಟ್ಟಿನಲ್ಲಿ ಇವರು ನಾಟಕರಂಗದ ಪ್ರಬುದ್ಧ, ಹಿರಿ-ಕಿರಿಯ ಕಲಾವಿದರ ಒಡನಾಟ ಹೊಂದಿದ್ದಾರೆ.
ಗ್ರಾಮೀಣ ಪ್ರದೇಶದ ಜನರೊಂದಿಗೆ ಬೆರೆತುಕೊಂಡ ಕಷ್ಟಜೀವಿಯಾಗಿರುವ  ಹಲವು ಸಂಘ-ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವಜ್ರದೇಹಿ ಮಠದ `ಸಂಜೀವಿನಿ’ ಎಂಬ ಬಡಜನರಿಗೆ ಆರ್ಥಿಕವಾಗಿ ನೆರವಾಗುವ ಸಂಸ್ಥೆಯ ಪ್ರಮುಖ ಕಾರ್ಯಕರ್ತನಾಗಿರುವ ಕಲಾವಿದ ಪ್ರಶಾಂತ್, ಈ ಮೂಲಕ ಸಮಾಜಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಹಲವು ಸನ್ಮಾನಕ್ಕೆ ಭಾಜನನಾಗಿದ್ದಾರೆ ಪ್ರಶಾಂತ್.s-2

ನಟನೂ ಆಗಿರುವ ಇವರು ಬರೆದಿರುವ  ಸಾಮಾಜಿಕ ಕಳಕಳಿ ನಾಟಕ `ದಾಯೆ ಬದ್ಕೆರಾಪುಜಿ’ ವಜ್ರದೇಹಿ ಮಠದ ಆವರಣದಲ್ಲಿ ಪ್ರದರ್ಶನಗೊಂಡಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ ಹಲವೆಡೆಯಿಂದ ಪ್ರದರ್ಶನಕ್ಕೆ ಆಹ್ವಾನ ಬಂದಿರುತ್ತದೆ. ಇದು ಸರಳ-ಸುಂದರ ಸಾಮಾಜಿಕ ಹಾಸ್ಯಮಯ ನಾಟಕವಾಗಿದೆ. ವಜ್ರದೇಹಿ ಮಠದಲ್ಲಿ ಹುಟ್ಟಿಕೊಂಡು ಗುರುಪುರದಲ್ಲೇ ಪ್ರಥಮ ನಾಟಕ ತಂಡವೆಂಬ ದಾಖಲೆ ಮಾಡಿರುವ `ಗುರುದಯ’ ತಂಡದ `ರಂಗ್‍ದ ಕಲಾವಿದೆರ್’ ಸದಸ್ಯರೀಗ ಮಂಗಳೂರು ಪುರಭವನದಲ್ಲಿ ಈ ನಾಟಕ ಪ್ರದರ್ಶನಕ್ಕೆ ಚಿಂತನೆ ನಡೆಸುತ್ತಿದ್ದಾರೆ.

vajra-1
ತಂಡದಲ್ಲಿರುವ ಶ್ರೀಜಿಎಸ್ ಗುರುಪುರ(ಸಾಹಿತ್ಯ), ಪಚ್ಚು ಕೈಕಂಬ(ನಿರ್ದೇಶಕ) ಹಾಗೂ ತಂಡದ ಯುವ ಕಲಾವಿದರು ಪ್ರಶಾಂತಗೆ ಸಾಥ್ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ತನಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತ ಬಂದಿರುವ ರಂಗಕರ್ಮಿಗಳಾದ ಲಯನ್ ಕಿಶೋರ್ ಡಿ ಶೆಟ್ಟಿ, ನವೀನ್ ಶೆಟ್ಟಿ ಅಳಕೆ,ಶೋಭಾ ಶೆಟ್ಟಿ ಶಕ್ತಿನಗರ,ಎಚ್ ಕೆ ನಾಯ್ನಾಡು ಹಾಗೂ ಮನೆಯವರ ಬೆಂಬಲ ಮತ್ತು ಇತರ ಕೆಲವು ಗೆಳೆಯರನ್ನು ಸ್ಮರಿಸಿಕೊಳ್ಳಲು ಪ್ರಶಾಂತ್ ಗುರುಪುರ ಮರೆತಿಲ್ಲ.

ಲೇಖನ : ಧನಂಜಯ ಗುರುಪುರ

 

By suddi9

Leave a Reply

Your email address will not be published. Required fields are marked *