ಬಂಟ್ವಾಳ : ಕೊಣಾಜೆ ಸಮೀಪದ ನಡುಪದವು ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಸೆಂಟರ್ ಫಾರ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ಹಾಗೂ ರಿಸರ್ಚ್ (ಎಂಬಿಎ) ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ವತಿಯಿಂದ ರಂಝಾನ್ ಪ್ರಯುಕ್ತ ಇಫ್ತಾರ್ ಕೂಟ ಜೂ 1 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್, ಎಂಬಿಎ ಡೈರೆಕ್ಟರ್ ಡಾ. ಬೀರಾನ್ ಮೊೈದಿನ್ ಬಿ.ಎಂ., ವಿದ್ಯಾರ್ಥಿ ಪ್ರಮುಖರಾದ ಅಫೀಲ್ ಬಿ.ಕೆ. ಆತೂರು, ಫೈಝಲ್, ಸಮದ್, ಝುಬೈರ್, ಶಾಕಿರುದ್ದೀನ್, ಉಸ್ಮಾನ್, ನಾಸಿರ್, ಮುನೀರ್, ಜಲಾಲ್, ಆಶಿಫ್, ಅಝೀಝ್ ಮೊದಲಾದವರು ಭಾಗವಹಿಸಿದ್ದರು.
