ಬಂಟ್ವಾಳ: ಶ್ರೀ ಭಯಂಕೇಶ್ವರ ದೇವಸ್ಥಾನ ನರಿಕೊಂಬು ,ಪಾಣೆಮಂಗಳೂರು ಇದರ ಪುನ: ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಸಂಧರ್ಭದಲ್ಲಿ ದೇವಾಲಯದ ರೂವಾರಿ ಹಾಗೂ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ. ಗಣಪತಿ ಸೋಮಯಾಜಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂಧರ್ಭದಲ್ಲಿ ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ಟ ಕಲ್ಲಡ್ಕ , ಬ್ರಹ್ಮಶ್ರೀ ನಿಲೇಶ್ವರ ಪದ್ಮನಾಭ ತಂತ್ರಿ , ರಾಜೇಶ ನಾಯಕ್ ಉಳಿಪಾಡಿಗುತ್ತು , ನಾರಾಯಣ ಸೋಮಯಾಜಿ , ರಘುನಾಥ ಸೋಮಯಾಜಿ , ರಘು ಸಪಲ್ಯ , ಪದ್ಮನಾಭ ಮಯ್ಯ, ಕೃಷ್ಣರಾಜ ಭಟ್ಟ, ಯಶೋಧರ ಕರ್ಬೆಟ್ಟು, ಕಿಶೋರ್ ಶೆಟ್ಟಿ ಮತ್ತು ಸೋಮಯಾಜಿ ಕುಟುಂಬಸ್ಥರು ಹಾಗೂ ಸಮಿತಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
