ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ ಇದರ 2017-18ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಮತ್ತು ಕಲಾವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ವಾಸ್ತವ್ಯ ಹೊಂದಿರುವ ಸ್ವಾಜಾತಿ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯಾ ಪ್ರತಿಭಾ ಪುರಸ್ಕಾರಗಳನ್ನು ನೀಡಲಾಗುವುದು. ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಹೆತ್ತವರು ಬಂಟ್ವಾಳ ತಾಲೂಕಿನಲ್ಲಿ ವಾಸ್ವತವ್ಯ ಹೊಂದಿರಬೇಕು, ವಿದ್ಯಾರ್ಥಿಗಳು ಕಳೆದ ವಾರ್ಷಿಕ ಪರೀಕ್ಷೆಯ ಅಂಕಪಟ್ಟಿ, ಭಾವಚಿತ್ರ, ಆದಾಯ ಪ್ರಮಾಣ ಪತ್ರ, ಮೋಬೈಲ್ ಸಂಖ್ಯೆ ಹಾಗೂ ಹೆತ್ತವರ ಸಹಿಯೊಂದಿಗೆ ಅರ್ಜಿಯನ್ನು ಸಂಘದ ಕಚೇರಿ ಕುಲಾಲ ಸಮುದಾಯ ಭವನ, ಪೊಸಳ್ಳಿ, ಅಂಚೆ ಜೋಡುಮಾರ್ಗ ಈ ವಿಳಾಸಕ್ಕೆ ಜು. 31ರೊಳಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *