ಬಂಟ್ವಾಳ :ಶ್ರೀ ವೀಣಾಧಾರಿಣಿ ಕಲಾ ಯುವಕ ಸಂಘ (ರಿ) ಬಂಟ್ವಾಳ ಇದರ ವತಿಯಿಂದ ಇತ್ತೀಚೆಗೆ ನಡೆದ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 98% ಅಂಕ ಗಳಿಸಿದ ಪ್ರತಿಭಾನ್ವಿತ ವಿಧ್ಯಾರ್ಥಿನಿ ಕುಮಾರಿ ವಿಜೇತ ಇವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ಜಿ.ಆನಂದ ಇವರು ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರಾದ ಪದ್ಮನಾಭ ಬಿ, ಹೇಮೇಂದ್ರ ಬಿ, ಸದಾಶಿವ ನಾೈಕ್, ಕೇಶವ ಮೂಲ್ಯ, ಅಶೋಕ್ ಕುಲಾಲ್, ಸಂಜೀವ ಕೊಟ್ಟಾರಿ, ಗಣೇಶ್ ಕುಲಾಲ್, ರಾಜೇಶ್ ಬಿ, ಯಶವಂತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಗೋಪಾಲ್ ಭಂಡಾರಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.
