ಬಂಟ್ವಾಳ : ನೇರಳಕಟ್ಟೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರೋಹಿತಾಶ್ವ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದಿವಂಗತ ಉರ್ದಿಲಗುತ್ತು ಇಂದುಹಾಸ ರೈ ಅವರ ಸ್ಮರಣಾರ್ಥ ಉರ್ದಿಲಗುತ್ತು ಕೆ. ರಾಮಪ್ರಸಾದ್ ರೈ ಅವರು ಕೊಡಮಾಡಿದ ಬರೆಯುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನೆಟ್ಲಮುಡ್ನೂರು ಗ್ರಾ.ಪಂ. ಸದಸ್ಯರುಗಳಾದ ಡಿ. ತನಿಯಪ್ಪ ಗೌಡ, ಅಬ್ದುಲ್ ಲತೀಫ್ ನೇರಳಕಟ್ಟೆ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಹೆತ್ತವರ ಪಾತ್ರ ಹಾಗೂ ಶಿಕ್ಷಣದ ಮಹತ್ವದ ಕುರಿತು ಮಾಹಿತಿ ನೀಡಿದರು.
ಗ್ರಾ.ಸಂ. ಸದಸ್ಯೆ ಪ್ರೇಮ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಭಾರತಿ, ಸದಸ್ಯರುಗಳಾದ ಶೀನಪ್ಪ ಮೂಲ್ಯ, ಅಬ್ದುರ್ರಹ್ಮಾನ್ (ಅದ್ದು) ಪರ್ಲೊಟ್ಟು, ಅಬೂಬಕ್ಕರ್ (ಅಬ್ಬು) ನೇರಳಕಟ್ಟೆ, ಜಯಂತಿ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಕ್ಷಕರುಗಳಾದ ರೇಶ್ಮಾ, ಸೇಸಪ್ಪ ನಾೈಕ್, ಜ್ಯೂಲಿಯೆಟ್, ಗೀತಾ ಕೆ.ಡಿ., ಜ್ಯೋತಿ ಹಾಗೂ ಲೀಲಾವತಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಐ ಸ್ವಾಗತಿಸಿ, ಸಹಶಿಕ್ಷಕಿ ಗೀತಾ ಕುಮಾರಿ ವಂದಿಸಿದರು. ಶಿಕ್ಷಕ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
