ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆಯಲ್ಲಿರುವ ವಾಜಪೇಯಿ ವಾಣಿಜ್ಯ ಸಂಕಿರ್ಣಕ್ಕೆ ಮೂಲಸೌಕರ್ಯ ಒದಗಿಸುವುದು ಸಹಿತ ಸೇವಾ ತೆರಿಗೆ ವಸೂಲಿ ಕ್ರಮವನ್ನು ಕೈಬಿಡುವಂತೆ ಆಗ್ರಹಿಸಿ ಸಂಕೀರ್ಣದ ವ್ಯಾಪಾರಸ್ಥರು ಪುರಸಭಾಧ್ಯಕ್ಷರಿಗೆ ಮಂಗಳವಾರ ಮನವಿ ಸಲ್ಲಿಸಿದರು.ಇಡೀ ವಾಣಿಜ್ಯ ಸಂಕೀರ್ಣದಲ್ಲಿ ಒಂದೇ ಒಂದು ಶೌಚಾಲಯದ ವ್ಯವಸ್ಥೆ ಇಲ್ಲದಿದ್ದು,ವ್ಯಾಪಾರಸ್ಥರು,ನೌಕರರು ಪಕ್ಕದ ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸಬೇಕಾಗಿದ್ದು,ಅದು ಕೂಡ ಸರಿಯಾದ  ನಿರ್ವಹಣೆ ಮತ್ತು ನೀರಿಲ್ಲದ ಅದನ್ನು ಬಳಸುವಂತ ಸ್ಥಿತಿಯಲ್ಲಿಲ್ಲ ಹಾಗಾಗಿ ವಾಣಿಜ್ಯ ಸಂಕೀರ್ಣದಲ್ಲೇ ಶೌಚಾಲಯ ನಿರ್ಮಿಸಿಕೊಡಬೇಕು,ಕಟ್ಟಡದ ಮುಂಭಾಗ ಪೂಟೇಜ್ ಸ್ಥಳವು ತೀರಾ ದುಸ್ಥಿತಿಯಲ್ಲಿದ್ಜು,ಜನರು ಓಡಾಡಲು ಸಾಧ್ಯವಾಗುತ್ತಿಲ್ಲ,ಮಳೆಗಾಲದಲ್ಲಿ  ನೀರು ಅಂಗಡಿಯೊಳಗೆ ನುಗ್ಗುವ ಅಪಾಯವಿದ್ದು,ಇಲ್ಲಿಗೆ ಕಾಂಕ್ರೇಟ್ ಹಾಕಿಕೊಡುವ ಮಾತು ಕೊಟ್ಟಿದ್ದರೂ ಈವರೆಗೂ ಈಡೇರಿಲ್ಲ ಎಂದು ಈ ಸಂದರ್ಭ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದರು.5-1

ಹಾಗೆಯೇ ವಿಧಿಸಲಾದ ಸೇವಾತೆರಿಗೆಯನ್ನು ಕೈಬಿಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.ಮನವಿ ಸ್ವೀಕರಿಸಿದ ಅಧ್ಯಕ್ಷ ರಾಮಕ್ರಷ್ಣ ಆಳ್ವ ರವರು ಈಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊರವರಿಗೆ ಸೂಚಿಸಿದರು.ಇದೇ ವೇಳೆ ಮನವಿ ಸ್ವಿಕರೀಸಿದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಅವರು, ಕಳೆದ ಎಪ್ರಿಲ್ ತಿಂಗಳಲ್ಲಿ ಪರಸಭೆಗೆ ವ್ಯಾಪಾರಸ್ಥರು ಮನವಿ ಸಲ್ಲಿಸಿದರೂ ಕೌನ್ಸಿಲ್ ಸಭೆಯ ಗಮನಕ್ಕೆ ತಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಈ ಕುರಿತಂತೆ ಕ್ರಮಕೈಗೊಳ್ಳುವ ಭರವಸೆ ನೀಡಿದರು.ಮನವಿಯ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ,ಜಿಲ್ಲಾಧಿಕಾರಿಯವರಿಗೂ ರವಾನಿಸಿದ್ದಾರೆ.

By Suddi9

Leave a Reply

Your email address will not be published. Required fields are marked *