ಕೈಕಂಬ:ಕಳೆದ ಒಂದು ವರ್ಷದಿಂದ ಕರಿಯಂಗಳಗ್ರಾಮ ಪಂಚಾಯಿತಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಪ್ರಭಾರ ಕರ್ತವ್ಯ ನಿರ್ವಹಿಸುತ್ತಿದ್ದ ನಯನ ಅವರನ್ನು ರಾಜಕೀಯ ಪ್ರೇರಿತವಾಗಿ ವರ್ಗಾವಣೆಗೊಳಿಸಲಾಗಿದ್ದು ಅವರನ್ನು ಮರಳಿ ಕರಿಯಂಗಳ ಗ್ರಾ.ಪಂಚಾಯಿತಿಗೆ ನೇಮಕಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಕರಿಯಂಗಳ ಪಂಚಾಯತಿಯ ಆವರಣದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮಹಿಳಾಗ್ರಾಮಸ್ಥರೇ ಗರಿಷ್ಠಸಂಖೈಯಲ್ಲಿ ಪಾಲ್ಗೊಂಡಿದ್ದು ಗ್ರಾಮಸ್ಥರ ಮನವಿಯನ್ನು ಸ್ವೀಕರಿಸಿದ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ ಹಾಗೂ ಉಪಾಧ್ಯಕ್ಷ ಚಂದ್ರಶೇಖರ ರಾವ್ ಮಾತನಾಡಿ ಪಿಡಿಓ ವರ್ಗಾವಣೆಯಿಂದ ಪಂಚಾಯಿತಿ ಅಭಿವೃದ್ಧಿ ಕೆಲಸಗಳಿಗೆ ಬಹಳ ತೊಡಕು ಉಂಟಾಗಿದೆ. ಪಿಡಿಓ ವರ್ಗಾವಣೆ ಬಗ್ಗೆ ಪಂಚಾಯಿತಿ ಆಡಳಿತ ಮಂಡಳಿಯ ಗಮನಕ್ಕೆ ತಾರದೇ ರಾಜಕೀಯ ಪ್ರೇರಿತವಾಗಿ ಆದೇಶನೀಡಲಾಗಿದೆ. ಪಿಡಿಓ ನಯನ ಅವರನ್ನು ಮರಳಿ ಕರಿಯಂಗಳ ಗ್ರಾ.ಪಂ ನೇಮಿಸುವ ನಿಟ್ಟಿನಲ್ಲಿ ಇಷ್ಟರಲ್ಲೆ ಸಂಬಂಧ ಪಟ್ಟವರ ಗಮನಕ್ಕೆ ವಾಸ್ತವ ಅಂಶಗಳ ಬಗ್ಗೆ ಗಮನಸೆಲೆಯಲಾಗಿದೆ ಎಂದು ಹೇಳಿದರು.ಪ್ರಮುಖರಾದ ತಿಮ್ಮಪ್ಪ ಆಳ್ವ, ಅರುಣ ಪೊಳಲಿ, ಪ್ರಮೀಳ ಪೊಳಲಿ,ಲತಾ, ಹರಿನಾಕ್ಷೀ ಪ್ರತಿಭಟನೆಯ ನೇತ್ರತ್ವವಹಿಸಿದ್ದರು.
ಈಸಂದರ್ಭದಲ್ಲಿ ತಾ.ಪಂ.ಸದಸ್ಯ ಯಶವಂತ ಪೂಜಾರಿ, ಗ್ರಾ.ಪಂ. ಸದಸ್ಯರಾದ ಕಿಶೋರ್ ಪಲ್ಲಿಪಾಡಿ, ಸುರೇಶ್ ಮಣಿಕಂಠಪುರ,ಗೊಪಾಲ್ ಕೃಷ್ಣ ಶೆಟ್ಟಿ, ನವಾಜ್ ಬಡಕಬೈಲ್ ಉಪಸ್ಥಿತರಿದ್ದರು.

