ಬಂಟ್ಬಾಳ ; ಕಲ್ಲಡ್ಕ ಪೇಟೆ ಸುತ್ತಮುತ್ತಲಿನ ಪರಿಸರದಲ್ಲಿ ಇತ್ತೀಚಿನದಿನಗಳಲ್ಲಿ ಕಿಡಿಗೇಡಿಗಳು ಶಾಂತಿ ದಡುತ್ತಿದ್ದಾರಲ್ಲದೆ ಕಾನೂನುಬಾಹಿರ ಚಟುವಟಿಕೆಯಲ್ಲೂ ತೊಡಗಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ.ಈಬಗ್ಗೆ ಕೂಲಂಕುಷ ತನಿಖೆ ನಡೆಸಿ ಸೂಕ್ತಕ್ರಮಕೈಗೊಂಡು ಶಾಂತಿ ಕಾಪಾಡಬೇಕೇಂದು ಬಿ.ಸಿರೋಡಿನಲ್ಲಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಯನ್ನು ಭೇಟಿಯಾದ ಬಂಟ್ವಾಳ ಕ್ಷೇತ್ರ ಬಿಜೆಪಿ ಯುವಮೋರ್ಚಾ ಮುಖಂಡರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಕಲ್ಲಡ್ಕದಲ್ಲಾದ ವಯ ಕ್ತಿಕ ಗಲಾಟೆಯನ್ನು ಕೋಮುಗಲಭೆಯ ಲೇಪ ನೀಡದೆ ಯಾವುದೇ ಕಾರಣಕ್ಕು ಅಮಾಯಕರನ್ನು ಬಂಧಿಸಬಾರದು ಎಂದೂ ಒತ್ತಾಯಿಸಿತು.ಹಾಗೆಯೇಕಲ್ಲಡ್ಕದಲ್ಲಾದ ಕೆಲ ಪ್ರಕರಣದಲ್ಲಿ ನಾಪತ್ತೆಯಾಗಿರುವ  ಆರೋಪಿಗಳನ್ನು ಪತ್ತೆಹಚ್ಚಬೇಕು,ಇಲ್ಲಿರುವ ಅನಧಿಕ್ರತ ಅಂಗಡಿಗಳ ಮೇಲೆ ನಿಗಾವಹಿಸಬೇಕುಮತ್ತು ಅವುಗಳ ತೆರವಿಗೆ ಕ್ರಮಕೈಗೊಳ್ಳಬೇಕು, ಇಲ್ಲಿ ಅಕ್ರಮವಾಗಿ ಗಾಂಜಾಮಾರಾಟದ ಬಗ್ಗೆ ಮೌಖಿಕ ದೂರು ನೀಡಿದರೂ ಕ್ರಮಕೈಗೊಳ್ಳದಿದ್ದರಿಂದ ಶಾಂತಿ ಕದಡಲು ಕಾರಣವಾಗಿದೆ ಎಂದು ನಿಯೋಗ ಅಸಮಾಧಾನ ವ್ಯಕ್ತಪಡಿಸಿತು.ಹಿಂದೂ ನಾಯಕರ ಮೇಲೆ ರಾಜಕೀಯ ಒತ್ತಡಕ್ಕೆ ಮಣಿದು ಸುಳ್ಳು ಕೇಸು ದಾಖಲಿಸುವುದನ್ನು ನಿಲ್ಲಿಸಬೇಕು,ಕಲ್ಲಡ್ಕ ಪರಿಸರದಲ್ಲಿ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ನಿಯೋಗ ಆಗ್ರಹಿಸಿತು.
ನಿಯೋಗದಲ್ಲಿ  ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಗಳಾದರಾಮದಾಸ್ ಬಂಟ್ವಾಳ,  ಮೋನಪ್ಪ ದೇವಸ್ಯ, ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಉಪಾಧ್ಯಕ್ಷ ವಿನೀತ್ ಶೆಟ್ಟಿ, ಕಾರ್ಯದರ್ಶಿಗಳಾದ ಲೋಕೇಶ್ ಭರಣಿ, ಸುರೇಶ್ ಕೋಟ್ಯಾನ್, ಕೋಶಾಧಿಕಾರಿ ಗುರುದತ್, ಸದಸ್ಯರಾದ ಅರವಿಂದ ಭಟ್, ದೀಪಕ್ ಸುಧೆಕಾರ್, ಕಾರ್ತಿಕ್ ಬಲ್ಲಾಳ್, ಗೋಳ್ತಮಜಲು ಶಕ್ತಿಕೇಂದ್ರ ಯುವಮೋರ್ಚಾ ಅಧ್ಯಕ್ಷ ರವಿರಾಜ್ ಗೋಳ್ತಮಜಲು ಸಜಿಪಮುನ್ನೂರು ಶಕ್ತಿಕೇಂದ್ರ ಅಧ್ಯಕ್ಷ ಕಿಶೋರ್ ಪಲ್ಲಿಪಾಡಿ, ವಕೀಲರ ಪ್ರಕೋಷ್ಟದ ಸಂಚಾಲಕರಾದ ರಾಜರಾಮ ನಾಯಕ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *