ಕೈಕಂಬ:ಕುಪ್ಪೆಪದವು ಕರ್ಬಾಲ ಪ್ರೆಂಡ್ಸ್ ಕುಪ್ಪೆಪದವು ಇದರ 14ನೇ ವಾರ್ಷಿಕೋತ್ಸವದ ಪ್ರಯುಕ್ತ ದ್ವಿತೀಯ ವರ್ಷದ ಸಾಮೂಹಿಕ ವಿವಾಹವು ಮೇ.7ರಂದು ಅದಿತ್ಯವಾರ ಕುಪ್ಪೆಪದವು ಮಸೀದಿ ವಠಾರದಲ್ಲಿ ದ.ಕ.ಜಿಲ್ಲೆಯ ಖಾಜಿಯವರಾದ ಬಹು ಅಲ್ಹಾಜ್ ತ್ವಾಖಾ ಅಹಮದ್ ಮುಸ್ಲಿಯಾರ್ ಅಲ್ ಅಝ್ಹರಿಯವರ ನೇತ್ರತ್ವದಲ್ಲಿ ನಡೆಯಲಿದೆ. ಸಮಸ್ತ ಕೇರಳ ಜಂ ಇಯ್ಯತುಲ್ ಉಲಾಮದ ಉಪಾಧ್ಯಕ್ಷರಾದ ಬಹು ಶೈಕುನಾ ಕೆ.ಎಅಬ್ದುಲ್ ಜಬ್ಬರ್ ಉಸ್ತಾದ್ ಮಿತ್ತಬೈಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.ಬಹು. ಶೈಕುನಾ ಕೆ.ಎಸ್.ಸೈಯದ್ ಅಲಿ ತಂಙಲ್ ಕುಂಬೀಳ್ ದುವಾ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆಯ ಖಾಜಿಯವರಾದ ಬಹು ಅಲ್ಹಾಜ್ ಬೇಕಲ ಇಬ್ರಾಹಿಂ ಮುಸ್ಲಿಯಾರ್, ಕುಪ್ಪೆಪದವು ಮಸೀದಿಯ ಮಾಜಿ ಖತೀಬರಾದ ಬಹು ಹಾಜಿ ಇಬ್ರಾಹಿಂ ಮುಸ್ಲಿಯಾರ್, ಕರ್ನಾಟಕ ರಾಜ್ಯದ ಅರಣ್ಯ ಸಚಿವ ಶ್ರೀ ಬಿ.ರಮಾನಾಥ ರೈ, ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಕೃಷ್ಣ ಪಾಲೆಮಾರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕ ಮೊಯಿದಿನ್ ಬಾವಾ,ಜೆಡಿಎಸ್ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಬಿ.ಎಂ.ಪರೂಕ್ ಭಾಗವಹಿಸಲಿದ್ದಾರೆ.
