ಕೈಕಂಬ: ಸಾವಿರ ವರ್ಷಗಳ ಇತಿಹಾಶವುಲ್ಲ ಪೌರಾಣಿಕ ಹಿನ್ನೆಲೆಯ ಕ್ಷೇತ್ರ ಮಂಗಳೂರು ತಾಲೂಕಿನ ಕೊಳಂಬೆ ಗ್ರಾಮದ ತಲಕಳ ಶ್ರೀ ಕಾಶೀವಿಶ್ವನಾಥೇಶ್ವರ ದೇಗುಲ ನವನಿರ್ಮಾಣಗೊಂಡು ಮೇ. 8 ರಂದು ನಡೆಯುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಪೂರ್ವ ಬಾವಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇ. 3 ಬುಧವಾರ ಪ್ರಾರಂಭಗೊಳ್ಳಲಿವೆ.
ಸುಮಾರು 90 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಜೀರ್ಣೋದ್ಧಾರದ ಕಾರ್ಯಗಳನ್ನು ನಡೆಸಲಾಗಿದ್ದು ಹೆಚ್ಚಿನ ಕೆಲಸಗಳನ್ನು ಗ್ರಾಮಸ್ಥರು ಕರಸೇವೆಯ ಮೂಲಕ ನಿರ್ವಹಿಸಿರುತ್ತಾರೆ. ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲದ ಕೊರತೆಯಿದ್ದು ಸ್ಥಳೀಯ ಶಾಸಕರು , ಸಂಸದರು. ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ಮುಜರಾಯಿ ಇಲಾಖೆಗೂ ಅನುಧಾನಕ್ಕಾಗಿ ಮನವಿ ಮಾಡಲಾಗಿದೆ.
ಧಾರ್ಮಿಕ ಧತ್ತಿ ಇಲಾಖೆಯಿಂದ ಇದುವರೆಗೆ ಯಾವುದೇ ಅನುಧಾನ ಹಾಗೂ ದೇಗುಳಕ್ಕೆ ಬರಬಹುದಾದ ತಸ್ತಿಕ್ ಕೂಡ ಈವರೆಗೂ ಮಂಜೂರಾಗಿಲ್ಲ ಎಂದು ಮಾಜಿ ಸಚಿವ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಧ್ಯಕ್ಷ ಬೈಲು ಮೇಗಿನ ಮನೆ ನಾಗರಾಜ ಶೆಟ್ಟಿ ಅವರು ಸೋಮವಾರ ದೇವಳದಲ್ಲಿ ಜರಗಿದ ಸುದ್ಧಿಗೋಷ್ಟಿಯಲ್ಲಿ ತಿಳಿಸಿದರು.

* ಮೇ. 3 ಬುಧವಾರ ಬೆಳಿಗ್ಗೆ ತಿಲಹೋಮ ದ್ವಾದಶ ಮೂರ್ತಿ, ಆರಾಧನೆ, ಸಂಜೆ ದೇವತಾಪ್ರಾರ್ಥನೆ ವಾಸ್ತುಪೂಜೆ.
* ಮೇ 4 ಗುರುವಾರ ಬೆಳಗ್ಗೆ ಗಣಪತಿ ಹೋಮ, ತೋರಣ ಮಹೂರ್ತ, ಉಗ್ರಾಣ ಮಹೂರ್ತ ಸಂಜೆ ನಾಗಬಣದಲ್ಲಿ ವಾಸ್ತು ಪೂಜೆ ಅಷ್ಠಬಂದ ಸ್ತಾಪನೆ,
* ಮೇ. 5 ಶುಕ್ರವಾರ ಬೆಳಿಗ್ಗೆ ಪ್ರಾಯಶ್ಛಿತ್ತ ನವಗ್ರಹ ಶಾಂಣತಿ ಹೋಮ, ಸಂಜೆ ದುರ್ಗಾನಮಸ್ಕಾರ ಪೂಜೆ .
* ಮೇ. 6 ಶನಿವಾರ ಬೆಳಿಗ್ಗೆ ಗಣಪತಿ ದೇವರಿಗೆ ಶುದ್ಧ ಕಲಸ ಅಭಿಷೇಕ ಸಂಜೆ ನಾಗ ದೇವರ ಹಾಗೂ ಪರವಾರ ಶಕ್ತಿಗಳ ಬಿಂಬಾ ಧಿವಾಸ
* ಮೇ 7 ಭಾನುವಾರ ಬೆಳಿಗ್ಗೆ ಕಲಸ ಮಂಟಪ, ಸಂಸ್ಕಾರ , ಸರ್ಪಸಂಸ್ಕಾರ, ಬೆಳಿಗ್ಗೆ 10.50 ರ ಕರ್ಕಾಟಕ ಲಗ್ನ ಸುಮುಹೂರ್ತದಲ್ಲಿ ನಾಗ ದೇವರು ಮತ್ತು ಪರಿವಾರ ಶಕಿಗಳ ಪ್ರತಿಷ್ಟೆ ಕಲಾಶಾಭಿಷೇಕ , ಆಶ್ಲೇಷ ಬಲಿ , ಪಾರ್ವತಿ ದೇವಿ ಪ್ರತಿಷ್ಟೆ ರಕ್ತೇಶ್ವರಿ ಪ್ರತಿಷ್ಟೆ ಕಲಾಶಾಭಿಷೇಕ ನಡೆಯಲಿದೆ. ಸಂಜೆ ಬ್ರಹ್ಮಕಲಶಪೂರಣ ಕಲಶಾಧಿವಾಸ ನಡೆಯಲಿದೆ.
* ಮೇ 8 ಸೋಮವಾರ ಬೆಳಿಗ್ಗೆ 10.16 ರ ನಡೆಯುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ಕಾಶೀ ವಿಶ್ವನಾಥೇಶ್ವರ ದೇವರಿಗೆ ಬ್ರಹ್ಮಕಲಾಶಾಭಿಷೇಕ ಜರುಗಲಿದೆ.

ಧಾರ್ಮಿಕ ಕಾರ್ಯಕ್ರಮಗಳು ಬ್ರಹ್ಮ ಶ್ರೀ ಕುಡುಪು ನರಸಿಂಹತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಪ್ರತಿ ನಿತ್ಯ ಮಧ್ಯಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ಇದೆ. ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ಪ್ರತಿ ದಿನ ಸಂಜೆ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಎಲ್ಲಾ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆಗಾಗಿ ನಾನಾ ಸಮಿತಿಗಳನ್ನು ರಚಿಸಲಾಗಿದೆ ಸುದ್ಧಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ವಿನೋಧರ ಪೂಜಾರಿ, ದೇವಳದ ಅರ್ಚಕ ಕೆ. ಪ್ರಭಾಕರ ರಾವ್ ಕೊಳಂಬೆ, ವಿಶ್ವನಾಥ ರೈ ಉಣಿಲೆ, ಪ್ರ.ಕಾರ್ಯದರ್ಶಿ ಧನಂಜಯ ಹೆಗ್ಡೆ ಸುಂಕದಕಟ್ಟೆ, ಕೆ. ತಿಮ್ಮಪ್ಪಗುಜರನ್ , ವಿಜಯ ಶೆಟ್ಟಿ ಕಲ್ಲೋಲೆ, ಕೋಲ್ಪೆ ರಾಮಕೃಷ್ಣ ಆಳ್ವ, ಶಿವರಾಮ ಹೆಗ್ಡೆ ಉಪಸ್ಥಿತರಿದ್ದರು.

