ಬಂಟ್ವಾಳ: ಮುಗ್ಧ ಭಕ್ತಿಗೆ ದೇವರು ಒಲಿಯುತ್ತಾನೆ. ಆಡಂಬರದ ಪ್ರದರ್ಶನಕ್ಕಿಂತ ಶುದ್ಧ ಮನಸ್ಸಿನಿಂದ ದೇವರನ್ನು ಆರಾಸಬೇಕು. ಧಾರ್ಮಿಕ ಶಿಕ್ಷಣದ ಕೊರತೆಯಿಂದ ಸಂಸ್ಕಾರ ದೂರವಾಗಿದೆ. ದೇವಸ್ಥಾನದ ಮೂಲಕ ಸಮಾಜದ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಕೇಮಾರು ಶ್ರೀ ಸಾಂದೀಪನಿ ಸಾಧಾನಾಶ್ರಮ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರದ ಅಷ್ಠಬಂಧ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ,ಶ್ರೀ ಗುರುಗಳ ಬೆಳ್ಳಿಪಾದ ಪ್ರತಿಷ್ಠೆ,ಶ್ರೀ ಆಂಜನೇಯ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಅಸ್ಪೃಶ್ಯತೆ ಎಂಬ ಭಾವನೆ ಇರುವವರೆಗೆ ಹಿಂದೂ ಸಮಾಜ ಉದ್ಧಾರವಾಗದು. ದೇವಸ್ಥಾನಗಳು ಇದನ್ನು ಹೋಗಲಾಡಿಸುವ ಆದರ್ಶ ಕೇಂದ್ರಗಳಾಗಬೇಕು. ತಾಯಿ ಮಡಿಲು ಸಂಸ್ಕೃತಿಯ ಕೇಂದ್ರವಾಗಬೇಕು ಎಂದರು.

ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾತನಾಡಿ ಗುರುವಿನ ಆರಾಧನೆಯಾಗುವಲ್ಲಿ ಭಗವಂತ ನೆಲೆಸಿದ್ದಾನೆ. ಗುರುವಿನ ಮೂಲಕ ದೇವರ ದರ್ಶನವಾಗುತ್ತದೆ ಎಂದ ಅವರು ದೇವಳದ ತಡೆಗೋಡೆ ರಚನೆಗೆ ಅನುದಾನ ಒದಗಿಸುವುದಾಗಿ ತಿಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ 33 ಕೋಟಿ ದೇವತೆಗಳನ್ನು ನಂಬುವ ತುಳುನಾಡಿನಲ್ಲಿ ಭಕ್ತರೊಳಗೆ ಜಗಳವಿಲ್ಲ. ಸನಾತನ ಧರ್ಮಕ್ಕೆ ಚ್ಯುತಿಯಿಲ್ಲ. ದೇವಸ್ಥಾನ ಎಲ್ಲಾ ಧರ್ಮೀಯರಿಗೂ ಶಕ್ತಿ ನೀಡುವ ತಾಣವಾಗಬೇಕು ಎಂದು ಹೇಳಿದರು.
ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ,ಮಾಣಿಬೆಟ್ಟು ಕ್ಷೇತ್ರದ ಧರ್ಮದರ್ಶಿ ಹರೀಶ ನಾಯ್ಕ , ಜಿ.ಪಂ.ಸದಸ್ಯ ಎಂ. ತುಂಗಪ್ಪ ಬಂಗೇರ, ಕಾರ್ಕಳ ದುರ್ಗ ಶ್ರೀ ಲಕ್ಷ್ಮಿ ಅಂಬಾ ಭವಾನಿ ದೇವಸ್ಥಾನದ ಅಧ್ಯಕ್ಷ ಕೆ. ಮಾಧವ ನಾಯ್ಕ, ಮಂಗಳೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ. ಎ. ನಾಯ್ಕ,ಬಿ.ಎಸ್.ಎನ್.ಎಲ್. ನಿವೃತ್ತ ಟೆಕ್ನಿಕಲ್ ಸುಪರ್‍ವೈಸರ್ ಎ.ಎಸ್.ನಾಯ್ಕ, ಜಿ.ಪಂ.ಮಾಜಿ ಅಧ್ಯಕ್ಷ ಕೆ.ಕೊರಗಪ್ಪ ನಾಯ್ಕ,ಬ್ರಿಂಡೇಲ್‍ಪದವು ಶ್ರೀ ಅಂಬಾ ಭವಾನಿ ದೇವಿ ದೇವಸ್ಥಾನದ ಅಧ್ಯಕ್ಷ ರುಕ್ಮಯ ನಾಯ್ಕ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ಶೆಟ್ಟಿ ದಂಡೆ,ಲಕ್ಷ್ಮೀನಾರಾಯಣ ಗೌಡ, ಮರಾಟಿ ಸ.ಸೇ.ಸ.ಸುಳ್ಯ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ಸೇವಾ ಸಮಿತಿ ಗೌರವಾಧ್ಯಕ್ಷ ಎ. ಸೋಮಪ್ಪ ನಾಯ್ಕ ಮಂಗಳೂರು,ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಿದ್ಧಕಟ್ಟೆ ವಲಯ ಮೇಲ್ವಿಚಾರಕ ಉಮೇಶ್ ಕೆ. ವೇದಿಕೆಯಲ್ಲಿದ್ದರು.
ಪದಾಧಿಕಾರಿಗಳಾದ ವಾಮನ ನಾಯ್ಕ, ರಾಮಕೃಷ್ಣ ದೇವಾಡಿಗ ಬೆಳ್ತಂಗಡಿ, ಜಯರಾಮ ನಾಯ್ಕ ನಿನ್ಯಾರು, ಶಶಿಧರ ನಾಯ್ಕ ಮಾಣಿಬೆಟ್ಟು,ಸುಂದರ ನಾಯ್ಕ ಇರ್ವತ್ತೂರು, ಕೇಶವ ಗೌಡ ಮತ್ತು ವಿವಿಧ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರ. ಕಾರ್ಯದರ್ಶಿ ರಾಮಚಂದ್ರ ಕೆಂಬಾರೆ ಮೂಡಬಿದಿರೆ ಅವರು ಸ್ವಾಗತಿಸಿದರು. ಸೇವಾ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ನಾಯ್ಕ ಕೆ. ಬೆಳ್ಳಾರೆ ಅವರು ಪ್ರಸ್ತಾವಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು ಅವರು ವಂದಿಸಿದರು. ಸಲಹೆಗಾರ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
