ಕೈಕಂಬ: ನಮ್ಮ ಸಂಸ್ಕಾರ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಭಜನಾಮಂದಿರಗಳನ್ನು ನಿರ್ಮಿಸಿ ನಿರಂತರ ಭಜನೆಯನ್ನು ಮಾಡಿದಾಗ ದೇವರು ಅನುಗ್ರಹಿಸುತ್ತಾನೆ ಎಂದು ಉಡುಪಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀ ಪಾದರು ಹೇಳಿದರು. ಅವರು ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂದಿರ ಹಾಗೂ ಶ್ರೀ ದೇವರ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಸೋಮವಾರ ಆಶೀರ್ವಚನ ನೀಡಿದರು
ಶುದ್ಧ ಮನಸ್ಸಿನಿಂದ ಭಗವಂತನನ್ನು ಪೂಜಿಸಿ ಆರಾಧನೆ ಮಾಡಿದಾಗ ಭಗವಂತ ಅನುಗ್ರಹಿಸುತ್ತಾನೆ ದೇವಸ್ಥಾನ ಭಜನಾಮಂದಿರಗಳಲ್ಲಿ ಭಜನೆಯೊಂದಿಗೆ ಆಧ್ಯಾತ್ಮಿಕ ಚಿಂತನೆ ನಡೆಸಿ ಧರ್ಮ ಜಾಗೃತಿ ಮೂಡಿಸಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಶುಭಶಂಸನೆಗೈದರು , ಸುಬ್ರಾಯ ಭಟ್ ಗಜಂತೋಡಿ ಪ್ರಾರ್ಥನೆಯೊಂದಿಗೆ ಅಣ್ಣಯ್ಯ ಎಂ ಪ್ರಾಸ್ತಾವಿಕ ಮಾತನಾಡಿದರು.
ಅಧ್ಯಕ್ಷತೆಯನ್ನು ಬಿ ನಾಗರಾಜ ಶೆಟ್ಟಿ ವಹಿಸಿದ್ದರು. ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಶ್ರೀನಿವಾಸ ಉಪಧ್ಯಾಯ , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಕಾರ್ಯವಾಹಕ ಧಾರ್ಮಿಕ ಉಪನ್ಯಾಸವನ್ನು ಸೀತಾರಾಮ ನೀಡಿದರು.ಮುಖ್ಯ ಅತಿಥಿಯಾಗಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಶ್ರೀಪತಿ ಆಚಾರ್ಯ ನಾರಳ, ಅಣ್ಣಯ್ಯ ಮಯ್ಯ, ಜಿ.ಪಂ ಸದಸ್ಯ ಯು.ಪಿ.ಇಬ್ರಾಹಿಂ, ತಾ. ಪಂ. ಸದಸ್ಯರಾದ ಜಿ.ಸುನೀಲ್ ಗಂಜಿಮಠ,ಸಚಿನ್ ಅಡಪ, ಗಂಜಿಮಠ ಗ್ರಾ.ಪಂ.ಅಧ್ಯಕ್ಷೆ ಮಾಲತಿ, ಗುರುಪುರ ಬಿ ಜೆ ಪಿ ಶಕ್ತಿ ಕೇಂದ್ರದ ಅಧ್ಯಕ್ಷ ದೋಗು ಪೂಜಾರಿ, ಮುಂಬೈ ನಿವೃತ ಏರ್‍ಂಡಿಯಾ ಪ್ರಬಂಧಕ, ಸಿಂಡಿಕೇಟ್ ಬ್ಯಾಂಕ್ ಮುಖ್ಯ ಪ್ರಬಂಧಕ ಮೊಗರು ಅಲ್‍ಬಿಸ್ ಜಾಕೂಬ್ ಉಧ್ಯಮಿ ಅರುಣು ಶೆಟ್ಟಿ ಮೊಗರು ಗುತ್ತು ಮತ್ತಿತರರು ಉಪಸ್ಥಿತರಿದ್ದರು. .ಮಹೇಶ್ ಶೆಟ್ಟಿ ಸ್ವಾಗತಿಸಿ, ಮೊಗರು ಗುತ್ತು ಯಶವಂತ ಶೆಟ್ಟಿ ಧನ್ಯವಾದವಿತ್ತರು. ರಮೇಶ್ ಆಚಾರ್ಯ ನಿರೂಪಿಸಿದರು.


