ಬಂಟ್ವಾಳ: ಸೀಮೆ ಎಣ್ಣೆಯನ್ನು ಆಕಸ್ಮಿಕವಾಗಿ ಸೇವಿಸಿ ಮಗುವೊಂದು ಮೃತಪಟ್ಟಿದೆ. ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮ ಸುಭಾಷ್ ನಗರದಲ್ಲಿರುವ ಜಲೀಲ್ ಎಂಬವರ ಪುತ್ರಿ ಆಯಿಷಾ ಜಯಿಷಾ (1.2 ವರ್ಷ) ಸಾವನ್ನಪ್ಪಿದ ಮಗು.
ಮೂರು ದಿನಗಳ ಹಿಂದೆ ಸಂಜೆಯ ವೇಳೆ ಜಲೀಲ್ ಅವರು ಕಾರಿನಲ್ಲಿ ಡಾಂಬರು ಅಂಟಿಕೊಂಡದ್ದನ್ನು ತೆಗೆಯುವ ಸಲುವಾಗಿ ಸೀಮೆ ಎಣ್ಣೆಯನ್ನು ತರಿಸಿ, ಕೆಲಸವಾದ ಬಳಿಕ ಉಳಿದ ಸೀಮೆ ಎಣ್ಣೆಯನ್ನು ಮನೆಯೊಳಗಿಟ್ಟಿದ್ದರು. ಬಾಟಲಿಯೊಂದರಲ್ಲಿಟ್ಟಿದ್ದ ಆ ಸೀಮೆ ಎಣ್ಣೆಯನ್ನು ಮಗು ಅಚಾನಕ್ ಆಗಿ ಬಾಯಿಗೆ ಎರೆದುಕೊಂಡು ಕುಡಿದಿದೆ. ಕೂಡಲೇ ಮನೆಯವರಿಗೆ ವಿಷಯ ಗೊತ್ತಾಗಿ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಮಂಗವಾರ ಬೆಳಗ್ಗೆ ಮಗು ಅಸು ನೀಗಿತು ಎಂದು ಬಂಟ್ವಾಳ ಪೊಲೀಸರು ತಿಳಿಸಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *