ಕೈಕಂಬ:ಗುರುಪುರ ಕೈಕಂಬದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರಾಮ್ ಸಂಭಾಗಣವು ಎ.15 ಶನಿವಾರ ಶುಭಾರಂಭಗೊಳ್ಳಲಿದೆ. ಸಭಾ ಕಾರ್ಯಕ್ರಮದ ಆಶೀರ್ವಚನವನ್ನು ಕಂದಾವರ ನೀಲಕಂಠೇಶ್ವರ ದೇವಸ್ಥಾನದ ಅರ್ಚಕ ಹಾಗೂ ಆಡಳಿತ ಮೊಕ್ತೇಸರರಾದ ಸುಬ್ರಹ್ಮಣ್ಯ ಉಡುಪ ನೀಡಲಿರುವರು.ಅಧ್ಯಕ್ಷತೆಯನ್ನು ಡಾ.ಶ್ರೀಪತಿ ಕಿನ್ನಿಕಂಬಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಂಜಿಮಠ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಸ್. ಜಗದೀಶ್, ನಿವೃತ್ತ ಉಪನ್ಯಾಸಕ ಮಾಧಮಯ್ಯ ಕೈಕಂಬ ಉಪಸ್ಥಿತರುವರು. ಇದೇ ಸಭಾಂಗಣದಲ್ಲಿ ಸಂಜೆ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು(ರಿ) ಇವರಿಂದ “ಶ್ರೀ ಕೃಷ್ಣ ಲೀಲಾಮೃತ ” ಎಂಬ ಪೌರಾಣಿಕ ಪುಣ್ಯ ಕಥಾಭಾಗವು ಜರುಗಲಿದೆ.
