ಕೈಕಂಬ: ಏ.16 ರಂದು ಭಾನುವಾರ ಸುಂಕದಕಟ್ಟೆ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಪುತ್ತೂರು ತಾಲೂಕಿನ ಶ್ರೀ ಕ್ಷೇತ್ರ ಗೆಜ್ಜೆ ಗಿರಿ ನಂದನ ಬಿತ್ತಲ್ ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನದ ಅಭಿವೃದ್ಧಿ ಕುರಿತು ಬಿಲ್ಲವ ಸಮಾಜ ಬಾಂಧವರ “ಸಮಾಲೋಚನಾ ಸಭೆ” ಹಾಗು ವಿಜ್ಙಾಪನಾ ಪತ್ರ ಬಿಡುಗಡೆ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗುರುಪುರ ಹಾಗೂ ಸುರತ್ಕಲ್ ವಲಯದ ಪೂರ್ವ ಭಾವಿ ಸಭೆಯು ವಾಮಂಜೂರಿನ ಅಮೃತ್ ಮಹಲ್ ನಲ್ಲಿ ಮಾ. 31 ರಂದು ಶುಕ್ರವಾರ ಜರಗಿತು.ಈ ಸಭೆಯಲ್ಲಿ ಹಲಾವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಮಾಜಿ ಮೇಯರ್ ರಜನಿ ದುಗ್ಗಣ್ಣ ” ಆಮತ್ರಣ ಪತ್ರ ಬಿಡುಗಡೆ “ಮಾಡಿದರು. ಈ ಸಂದರ್ಭದಲ್ಲಿ ಬಿಲ್ಲವ ಮುಖಂಡರಾದ ಚಂದ್ರಶೇಖರ ಉಚ್ಚಿಲ, ಸತ್ಯಜಿತ್ ಸುರತ್ಕಲ್ ,ಕೃಷ್ಣ ಅಮೀನ್, ರವಿ ಚಿಲಿಂಬಿ, ದೀಪಕ್ ಕೋಟ್ಯಾನ್, ರಾಜ್ಯ ಧಾರ್ಮಿಕಧತ್ತಿ ಪರಿಷತ್ತು ಸದಸ್ಯ ಪದ್ಮನಾಭ ಕೋಟ್ಯಾನ್, ಮಧುಸೂದನ್ ಹಿಡ್ಯ, ದೊಂಬಯ್ಯ ಪೂಜಾರಿ, ಪುರುಷೋತ್ತಮ್ ಚಿತ್ರಾಪುರ, ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

1 vp bidugade

10 v

4 v9 v

1v

3 c

11 v

12 v

7 v

8 v

5 v

ಏ.16 ರಂದು ಭಾನುವಾರ ಸುಂಕದಕಟ್ಟೆ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ನಡೆಯುವ ಸಮಾಲೋಚನಾ ಸಭೆ ಹಾಗು ವಿಜ್ಙಾಪನಾ ಪತ್ರ ಬಿಡುಗಡೆ ಕಾರ್ಯಕ್ರಮಕ್ಕೆ ಕೈಕಂಬ ಹಾಗೂ ಬಜಪೆಯಿಂದ ಗುರುಪುರ ಹಾಗೂ ಸುರತ್ಕಲ್ ವಲಯಕ್ಕೆ ಒಳಪಟ್ಟ ಬಿಲ್ಲವ ಸಮಾಜ ಬಾಂದವರು ವಾಹನಜಾಥದ ಮೂಲಕ ಸುಂಕದಕಟ್ಟೆಗೆ ಎಲ್ಲರು ಒಗ್ಗಟ್ಟಾಗಿ ತೆರಳುವುದಾಗಿ ತೀರ್ಮಾನಿಸಲಾಯಿತು. ಇದರ ಜವಾಬ್ಧಾರಿಯನ್ನು ಆಯ ಗ್ರಾಮದ ಮುಖಂಡರು ವಹಿಸಿಕೊಳ್ಳುವುದಾಗಿ ಹೇಳಿದರು. ಗಣೇಶ್ ಪೂಜಾರಿ ಸ್ವಾಗತಿಸಿ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ದಾಸ್ ವಂದಿಸಿದರು.

ಏ. 16ರಂದು ಬಿಲ್ಲವ ಬಾಂಧವರ  ಬ್ರಹತ್ ವಾಹನ ಜಾಥ :
ಏ.16 ರಂದು ಭಾನುವಾರ ಸುಂಕದಕಟ್ಟೆ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ನಡೆಯುವ ಸಮಾಲೋಚನಾ ಸಭೆ ಹಾಗು ವಿಜ್ಙಾಪನಾ ಪತ್ರ ಬಿಡುಗಡೆ ಕಾರ್ಯಕ್ರಮಕ್ಕೆವಾಹನ ಜಾಥವು ಬಜಪೆ ಹಾಗೂ ಕೈಕಂಬದಿಂದ ಸುಂಕದಕಟ್ಟೆಗೆ: ಬೋದೇಲ್ ಪಚ್ಚಿನಡ್ಕ, ನೀರು ಮಾರ್ಗ ವಾಮಂಜೂರು, ಮೂಡುಶೆಡ್ಡೆ, ಗುರುಪುರ, ಅಡ್ಡೂರು, ಗಂಜಿಮಠ, ಮಳಲಿ, ಕಾಜಿಲ, ಕುಪ್ಪೆಪದವು, ಎಡಪದವು ಮುಂತಾದ ಕಡೆಗಳಿಂದಕೈಕಂಬಕ್ಕೆ ಬಂದು ಸೇರುವುದು. ಕರಂಬಾರು, ಕೃಷ್ಣಾಪುರ, ಸುರತ್ಕಲ್ ಕಾಟಿಪಲ್ಲ, ಎಕ್ಕಾರ್, ಪೆರ್ಮುದೆ ಈ ಭಾಗದ ಬಿಲ್ಲವ ಬಾಂಧವರು ಬಜಪೆಗೆ ಬಂದು ಸೇರುವುದು ಮಧ್ಯಾಹ್ನ 2 ಗಂಟೆಗೆ ತಮ್ಮ ತಮ್ಮ ವಾಹನದಲ್ಲಿ ಬಂದು ಜಾಥದಲ್ಲಿ ಸೇರುವುದು.

By suddi9

Leave a Reply

Your email address will not be published. Required fields are marked *