ಉಳ್ಳಾಲ: ಸರ್ಕಾರಿ ಶಾಲೆಗಳಂತೆ ಅನುದಾನಿತ ಶಾಲೆಗಳ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರೂ ಸರ್ಕಾರ, ಸರ್ಕಾರಿ ಶಾಲಾ ಶಿಕ್ಷಕರಿಗೆ ನೀಡುವ ಸೌಲಭ್ಯಗಳೆಲ್ಲವನ್ನೂ ಅನುದಾನಿತ ಶಾಲಾ ಶಿಕ್ಷಕರಿಗೆ ನೀಡುವಲ್ಲಿ ಬಹಳಷ್ಟು ವಿಳಂಬ/ತಾರತಮ್ಯ ಮಾಡುತ್ತಿದೆ. ಸರ್ಕಾರಿ ಶಾಲಾ ಶಿಕ್ಷಕರಿಗೆ ಏಪ್ರೀಲ್ 2012 ರಿಂದಲೇ 8 ಸ್ಥಗಿತ ವೇತನ ಭಡ್ತಿ ದೊರೆಯುತ್ತಿದ್ದರೂ ಅನುದಾನಿತ ಶಾಲಾ ಶಿಕ್ಷಕರಿಗೆ ಮಾತ್ರ 7/2016 ರಿಂದ ನೀಡಲು ಆದೇಶಿಸಿರುವುದು ಸರ್ಕಾರದ ತಾರತಮ್ಯಕ್ಕೆ ಉದಾಹರಣೆಯಾಗಿರುತ್ತದೆ.

ಸರ್ಕಾರದ ಹಂತದಲ್ಲಿ ಈ ರೀತಿ ಕಾರ್ಯಗಳಾಗಿದ್ದರೂ ಈ ಜಿಲ್ಲೆಯ ಶಿಕ್ಷಣ ಇಲಾಖಾ ಹಂತದಲ್ಲಿ ಈ ವರೆಗೆ ಅನುದಾನಿತ ಶಾಲಾ ಶಿಕ್ಷಕರಿಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡಿ ಕಾರ್ಯ ನಿರ್ವಹಿಸುತ್ತಿರುವುದು ಸಮದಾನಕರ ವಿಷಯವಾಗಿದೆ.ಆದರೆ ಕೆಲವೊಂದು ಇಲಾಖೆಯು ತಾರತಮ್ಯವನ್ನು ಮುಂದುವರಿಸಿ ಅನುದಾನಿತ ಶಿಕ್ಷಕರನ್ನು ಶೋಷಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗು ಜಿಲ್ಲಾ ಅಧ್ಯಕ್ಷ ಕೆ ಎಂ.ಕೆ ಮಂಜನಾಡಿ ಆರೋಪಿಸಿದರು.

ಮಂಗಳೂರು ಜಿಲ್ಲಾ ಖಜಾನೆ ಮಾತ್ರ ಇದಕ್ಕೆವ್ಯತಿರಿಕ್ತವಾಗಿಕಾರ್ಯಾಚರಣೆ ಮಾಡುತ್ತಿರುವುದು ಖೇದಕರವಾಗಿದೆ ಸರ್ಕಾರಿ ಆದೇಶ ಸಂಖ್ಯೆ: ಎಫ್‍ಡಿ/3/ಟಿ.ಎ.ಆರ್/2000 ಬೆಂಗಳೂರು ದಿ: 03/05/2000 ರಂತೆ ಕೆಸಿಎಸ್.ಆರ್ ನಿಯಮ 118 [ಎ] 1 ರಂತೆ ಎಲ್ಲಾ ಸರ್ಕಾರಿ ಇಲಾಖೆಗಳ ನಿವೃತ್ತ ನೌಕರರು ಮತ್ತು ಸರ್ಕಾರಿ ಹಾಗೂ ಅನುದಾನಿತ ನಿವೃತ್ತ ಶಾಲಾ ಶಿಕ್ಷಕರು ಗಳಿಕೆ ರಜೆ ನಗಧೀಕರಣಕ್ಕಾಗಿ ಗರಿಷ್ಠ 300 ದಿನದ ಗಳಿಕೆ ರಜೆ ನಗಧೀಕರಿಸಲು ಲೆಕ್ಕಶಿರ್ಷಿಕೆ2071-01-115-2-02 [ವಿಶ್ರಾಂತಿ ವೇತನ ಮತ್ತು ಇತರ ನಿವೃತ್ತಿ ಸೌಲಭ್ಯಗಳು ರಜೆ ನಗಧೀಕರಣ ಸೌಲಭ್ಯಗಳು ಸಾಮಾಜಿಕ ಸೇವೆಗಳು ಸಾಮಾನ್ಯ ಶಿಕ್ಷಣ] ಈ ಲೆಕ್ಕ ಶಿರ್ಷಿಕೆಯಡಿಯಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ. ಇದಕ್ಕೆ ಪ್ರತ್ಯೇಕ ಅನುದಾನದ ಅಗತ್ಯವಿರುವುದಿಲ್ಲ. ಈ ಆದೇಶದಂತೆ ಎಲ್ಲಾ ಇಲಾಖೆಗಳ ನಿವೃತ್ತ ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಗಳಿಕೆ ರಜೆ ಪಡೆಯದೇ ಉಳಿಸಿಕೊಂಡು ಕಾರ್ಯನಿರ್ವಹಿಸಿ, ನಿವೃತ್ತಿ ಅಂಚಿನಲ್ಲಿ ಸದ್ರಿ ಸೌಲಭ್ಯ ಈ ದಿನದ ವರೆಗೆ ಪಡೆಯುತ್ತಿದ್ದಾರೆ.

ಆದರೆ ನಿವೃತ್ತ ಅನುದಾನಿತ ಶಾಲೆಗಳ ಶಿಕ್ಷಕರು/ನೌಕರರಿಗೆ ನಿವೃತ್ತಿ ನಂತರ ಗಳಿಕೆ ರಜೆ ನಗಧೀಕರಣಕ್ಕಾಗಿ ಬಿಲ್ಲು ಮಂಗಳೂರು ಜಿಲ್ಲಾ ಖಜಾನೆಗೆ ಸಲ್ಲಿಸಿದ್ದಲ್ಲಿ ವೇತನ ಸೆಳೆಯುವ ಲೆಕ್ಕಶಿರ್ಷಿಕೆ ಹಾಗೂ ನಿಧಿಯಿಂದ ಕ್ಲೈಮ್ ಭರಿಸುವಂತೆ ಆಕ್ಷೇಪಣೆ ನೀಡಿ ಬಿಲ್ಲು ಹಿಂತಿರುಗಿಸಲ್ಪಡುತ್ತಿದ್ದು, ಇದರಿಂದ ಅನುದಾನಿತ ಶಾಲಾ ನೌಕರರು ಮಾತ್ರ ಕಳೆದ 6-7 ತಿಂಗಳಿಂದ ಸದ್ರಿ ಸೌಲಭ್ಯದಿಂದ ವಂಚಿತರಾಗಿರುತ್ತಾರೆ.
ತಿಂಗಳ ವೇತನಕ್ಕೇ ಅನುದಾನದ ಕೊರತೆ ಇರುವಾಗ ಯಾವುದೇ ಸರ್ಕಾರಿ ಆದೇಶವಿಲ್ಲದೇ ನಿವೃತ್ತ ನೌಕರರ ಗಳಿಕೆ ರಜೆ ನಗಧೀಕರಣಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರದಿಂದ ಯಾವ ರೀತಿಯಲ್ಲಿ ಕೇಳಬೇಕೆಂದು ತೋಚದ ಸ್ಥಿತಿ ಜಿಲ್ಲಾ ಶಿಕ್ಷಣ ಇಲಾಖೆಯದ್ದಾಗಿರುತ್ತದೆ.

ಈ ರೀತಿಯ ಆಕ್ಷೇಪಣೆ ಮಂಗಳೂರು  ಉಡುಪಿ ಅಥವಾ ರಾಜ್ಯದ ಯಾವುದೇ ಜಿಲ್ಲೆಯ/ತಾಲೂಕು ಮಟ್ಟದ ಖಜಾನಾಧಿಕಾಗಳು ನೀಡುತ್ತಿಲ್ಲ ಎಂಬುದನ್ನು ಗಮನಿಸಬೇಕಾದ ವಿಚಾರವಾಗಿರುತ್ತದೆ. ಮತ್ತು ಮಂಗಳೂರು ಜಿಲ್ಲಾ ಖಜಾನಾಧಿಕಾರಿಯವರು ನೀಡುತ್ತಿರುವ ಆಕ್ಷೇಪಣೆಗೆ ಪೂರಕವಾಗಿ ಸೂಕ್ತ ಸರ್ಕಾರಿ ಆದೇಶವನ್ನು ನೀಡುವಂತೆ ಮಾನ್ಯ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ರವರು ಜಿಲ್ಲಾ ಖಜಾನಾ ಉಪನಿರ್ದೇಶಕರಿಗೆ ತಿಳಿಸಿದ್ದರೂ ಯಾವುದೇ ರೀತಿ ಪ್ರತಿಕ್ರೀಯಿಸದೇ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದರ ಬಗ್ಗೆ ನಿವೃತ್ತ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಂದರು.
ಈ ರೀತಿಯ ತನ್ನ ಆಕ್ಷೇಪಣೆಗೆ ಯಾವುದೇ ರೀತಿಯಲ್ಲಿ ಸರ್ಕಾರಿ ಆದೇಶವನ್ನು ಕಾಣಿಸದೇ ತನ್ನದೇ ಆದ ಧೋರಣೆಯಿಂದಾಗಿ ಬಡ ನಿವೃತ್ತ ಅನುದಾನಿತ ಶಿಕ್ಷಕರಿಗೆ ಸರ್ಕಾರ ನೀಡುವ ಸೌಲಭ್ಯಕ್ಕೆ ಜಿಲ್ಲಾಖಜಾನಾಧಿಕಾರಿ ಕತ್ತರಿ ಪ್ರಯೋಗ ಮಾಡುತ್ತಿದ್ದಾರೆ.

ನಿವೃತ್ತ ಶಿಕ್ಷಕರಿಗೆ ಕ್ಲಪ್ತ ಸಮಯದೊಳಗೆ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ಸರ್ಕಾರ ಆದೇಶ ಮಾಡಿದ್ದರೂ ಅನುದಾನಿತ ಶಿಕ್ಷಕರು ಇದರಿಂದ ವಂಚಿತರಾಗಿರುವರು. ಇನ್ನಾದರೂ ಸರ್ಕಾರಿ ಆದೇಶವನ್ನು ಪಾಲಿಸಿ ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸುವಂತೆ ಒತ್ತಾಯಿಸುವ ಮನವಿಯನ್ನು ಜಿಲ್ಲಾ ಖಜಾನಾಧಿಕಾರಿಗಳಿಗೆ .ನೀಡಲಾಯಿತು ನಿಯೋಗದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಗಳೂರು ದಕ್ಷಿಣವಲಯದ ಅಧ್ಯಕ್ಷ ಎಂ ಹೆಚ್ ಮಲಾರ್ ಇದ್ದರು.

By suddi9

Leave a Reply

Your email address will not be published. Required fields are marked *