ಉಳ್ಳಾಲ: ಧಾರ್ಮಿಕ ಶಿಕ್ಷಣ ಪಡೆಯುವ ದೃಷ್ಟಿಯಿಂಧ ವಾದಿತೈಬಾ ಕಿನ್ಯದಲ್ಲಿ ಸ್ಥಾಪನೆಯಾಗುವ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ಕಟ್ಟಡಕ್ಕೆ ಎಲ್ಲರೂ ನೆರವಾಗಬೇಕೆಂದು ಸಿಂಸಾರುಲ್ ಹಕ್ ಹುದವಿ ಅಬುದಾಬಿ ಕರೆ ನೀಡಿದರು.
ಅವರು ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ವಾದಿತೈಬಾ ಕಿನ್ಯ ಇದರ ಆಶ್ರಯದಲ್ಲಿ ಸೋಮವಾರ ವಾದಿತೈಬಾ ಕ್ಯಾಂಪಸ್ ಕಿನ್ಯದಲ್ಲಿ ಜರಗಿದ ತೈಬಾ ವಸಂತಂ ಸ್ನೇಹ ಸಮ್ಮಿಲನದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹುಸೈನ್ ಬಾ ಅಲವಿ ತಂಙಳ್ ಮಾತನಾಡಿ, ಇಸ್ಲಾಂನ ವಿಚಾರಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಲು ಕಾಲೇಜಿನ ಅವಶ್ಯಕತೆ ಬಹಳಷ್ಟಿದೆ. ವಿದ್ಯಾಭ್ಯಾಸ ಇದ್ದವರಿಗೆ ಮಾತ್ರ ಸಮಾಜದಲ್ಲಿ ಸ್ಥಾನ ಸಿಗುತ್ತದೆ. ಎಲ್ಲರೂ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ವಾದಿತ್ವೈಬ ಕಿನ್ಯದ ಅಧ್ಯಕ್ಷ ಸಯ್ಯದ್ ಅಮೀರ್ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಇಬ್ರಾಹಿಂ ಬಾತಿಷಾ ತಂಙಳ್ ಆನೆಕಲ್ಲು, ಶೈಖುನಾ ಎ.ವಿ. ಅಬ್ದುಲ್ರಹ್ಮಾನ್ ಮುಸ್ಲಿಯಾರ್ ನಂದಿ, ಸಯ್ಯದ್ ಎನ್ಪಿಎಂ ಝೈನುಲ್ ಆಬಿದೀನ್ ತಂಙಳ್, ಪಾತೂರು ಉಸ್ತಾದ್, ಅಬ್ದುಲ್ಲಾ ಪೈಝಿ ಎಡಪಾಲಂ, ಸಯ್ಯದ್ ಕರಾವಳಿ ತಂಙಳ್, ಸಯ್ಯದ್ ಬದ್ರುದ್ದೀನ್ ತಂಙಳ್, ಇಬ್ರಾಹಿಂ ಕೊಂಬಂಕುದಿ, ಇಸ್ಹಾಕ್ ಹಾಜಿ ನಾಟೆಕಲ್, ಜಮಾಲುದ್ದೀನ್ ಮಂಗಳನಗರ, ಇಬ್ರಾಹಿಂ ಬಾಖವಿ ಕೆಸಿರೋಡ್, ಕೆ.ಬಿ. ಅಬ್ದುಲ್ ಖಾದರ್ ದಾರಿಮಿ, ಸಿರಾಜುದ್ದೀನ್ ಕುತುಬಿನಗರ, ಫಾರೂಕ್ ಕಿನ್ಯ, ಮುಹಮ್ಮದ್ ಕಿನ್ಯ, ಕೆ.ಬಿ. ಅಬೂಸ್ವಾಲೀಹ್ ಕಿನ್ಯ ಎಸ್ಡಿಎ ಯೂತ್ವಿಂಗ್ ಅಧ್ಯಕ್ಷ ಅರ್ಶದ್ ಕಿನ್ಯ , ಎಸ್ಡಿಎ ವಾದಿತ್ವೈಬಾದ ಕೋಶಾಧಿಕಾರಿ ಅಬೂಸ್ವಾಲೀಹ್ ಕುರಿಯಕ್ಕಾರ್, ಕಾರ್ಯದರ್ಶಿ ಅಹ್ಮದ್ ಸಿರಾಜ್ ಅಲಂಕಾರು ಮೊದಲಾದವರು ಉಪಸ್ಥಿತರಿದ್ದರು. ಶಂಶುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ಪ್ರಾಂಶುಪಾಲ ಕೆ.ಎಂ. ಖಾಸಿಂ ದಾರಿಮಿ ಸ್ವಾಗತಿಸಿದರು.
