ಕೈಕಂಬ:ಆಯುರ್ ಸ್ಪರ್ಶ ಡಯಾಬೆಟಿಕ್ ಇನ್ನೋವೆಟ್ ರೀಸರ್ಚ್ ಫೌಂಡೇಷನ್(ರಿ) ಗಂಜೀಮಠ “ಮಧುಮೇಹ ಮುಕ್ತ ಭಾರತ” ಜನಜಾಗೃತಿ ಅಭಿಯಾನದಂಗವಾಗಿ ಉಚಿತ ಮಧುಮೇಹ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವು ಮಾ.16 ಗುರುವಾರ ಬೆಳಿಗ್ಗೆ 9ರಿಂದ 12.30ರವರೆಗೆ ಆಯುರ್ ಸ್ಪರ್ಶ ಆರ್ಯುವೇದ ಆಸ್ಪತ್ರೆ ಗಂಜೀಮಠದಲ್ಲಿ ನಡೆಯಲಿದೆ.
ಶಿಬಿರದ ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆಯನ್ನು ಕೇಮಾರು ಸಾಧನಾಶ್ರಮದ ಶ್ರೀಶ್ರೀಶ್ರೀ ಈಶವಿಠಲದಾಸ ಸ್ವಾಮೀಜಿ ಮಾಡಲಿರುವರು.ಮುಖ್ಯ ಅತಿಥಿಯಾಗಿ ಪ್ರಸನ್ನ ಆಯುರ್ವೇದ ಕಾಲೇಜು ಬೆಳ್ತಂಗಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಶ್ರೀ ಕುಮಾರ್ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಆಯುರ್ ಸ್ಪರ್ಶ ಡಯಾಬೆಟಿಕ್ ಇನ್ನೋವೆಟ್ ರೀಸರ್ಚ್ ಫೌಂಡೇಷನ್ ಗಂಜೀಮಠ ಇದರ ಅಧ್ಯಕ್ಷರು ಡಾ.ಸತೀಶ್ ಶಂಕರ್ ಬಿ ವಹಿಸಲಿರುವರು.

By Suddi9

Leave a Reply

Your email address will not be published. Required fields are marked *