ಕೈಕಂಬ: ಬಡಗ ಎಡಪದವು ಶ್ರೀ ಶಾಸ್ತವು ಭೂತನಾಥೇಶ್ವರ ಟ್ರಸ್ಟ್ ಹಾಗೂ ನಮ್ಮ ಟಿ.ವಿ ಸಹಯೋಗದಲ್ಲಿ ನಡೆದ ನಮ್ಮ ಸೂಪರ್ ಸಿಂಗರ್, ಗಾಯನ ಸ್ಪರ್ಧೆಯ ಫೈನಲ್‍ಗೆ ಮುನ್ನ ಟಾಪ್ 11 ಹಾಡುಗಾರರೊಂದಿಗೆ ಅವರ ಕುಟುಂಬದ ಸದಸ್ಯರು ಸಾಥ್ ನೀಡಿ, ಹಾಡಿದರು. ಫೈನಲ್‍ಗೇರಿದ ಯುವ ಗಾಯಕರನ್ನು ಅವರ ಕುಟುಂಬದವರು ಯಾವ ರೀತಿ ಪ್ರೋತ್ಸಾಹಿಸುತ್ತಾರೆ ಎನ್ನುವುದಕ್ಕೆ ಸ್ಪರ್ಧೆಯ `ಫ್ಯಾಮಿಲಿ ರೌಂಡ್ಸ್’ ಸಾಕ್ಷಿಯಾಯಿತು.mbd_feb26_5 (11)

mbd_feb26_5 (7)

mbd_feb26_5 (5)

mbd_feb26_5 (8)

ಶ್ರೀಕ್ಷೇತ್ರ ಶಾಸ್ತವಿನಲ್ಲಿ ಭಾನುವಾರ ನಡೆದ ಸೂಪರ್ ಸಿಂಗರ್ ರಿಯಾಲಿಟಿ ಶೋನಲ್ಲಿ ಫೈನಲ್ ಸ್ಪರ್ಧಿಗಳಾದ ಐರಾ ಆಚಾರ್ಯ ಉಡುಪಿ, ಲಹರಿ ಕೋಟ್ಯಾನ್ ಪುತ್ತೂರು, ನಿಶಾನ್ ರೈ ಕುಲಶೇಖರ, ವಿನುಶ್ ಭಾರದ್ವಾಜ್ ಕುಂದಾಪುರ, ಕೀರ್ತನ್ ಹೊಳ್ಳ ಮಂಗಳೂರು, ಚೇತನಾ ಬಿಜೈ, ವೈಷ್ಣವಿ ಕಿಣಿ ಮಂಗಳೂರು, ವೈಷ್ಣವಿ ಆರ್ ಮಣಿಪಾಲ, ನಿಹಾಲ್ ತಾವ್ರೋ ಮೂಡುಬಿದಿರೆ, ರಜತ್ ಮಯ್ಯ ಉಜಿರೆ, ಪ್ರಜ್ಞಾ ಅಡಿಗ ಉಡುಪಿ, ಚೇತನಾ ಬಿಜೈ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಾಡು ಹಾಡಿ ಮೋಡಿ ಮಾಡಿದರು. ತಮ್ಮ ಅಮ್ಮ, ಅಪ್ಪ, ಸಹೋದರ, ಸಹೋದರಿ ಸಹಿತ ಕುಟುಂಬದ ಸದಸ್ಯರೊಂದಿಗೆ ಸೇರಿ ಹಾಡು ಹಾಡಿದರು.
ಕನ್ನಡ ಚಿತ್ರರಂಗ ಖ್ಯಾತ ಸಂಗೀತ ನಿರ್ದೇಶಕರಾದ ವಿ.ಮನೋಹರ್, ಗುರುಕಿರಣ್, ಶ್ರೀ ಶಾಸ್ತವು ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ್ ವಿಠಲ್ ಶೆಟ್ಟಿ, ರಾಜಗೋಪಾಲ್, ಕಿಟ್ಟು, ಗಾಯಕಿ ಅಲಕಾ ಸುಬ್ರಹ್ಮಣ್ಯ ತೀರ್ಪುಗಾರರಾಗಿ ಸಲಹೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯನಾಥ್ ವಿಠಲ್ ಶೆಟ್ಟಿ ಅವರ ತಾಯಿ ಪ್ರೇಮಲತಾ ಶೆಟ್ಟಿ, ಬಿಜೆಪಿ ಹಿರಿಯ ಮುಖಂಡ ಜಗದೀಶ್ ಅಧಿಕಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ವಿಜೆ ಸೌಜನ್ಯಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *