ಬಜ್ಪೆ: ಜೋಕಟ್ಟೆಯ ಸಿಂಡಿಕೇಟ್ ಬ್ಯಾಂಕ್ ಸಮೀಪದ ಶಾಂತಿಗುಡ್ಡೆ ಎಂಬಲ್ಲಿ ರವಿವಾರ ರಾತ್ರಿ ಸುರಿದ ಗಾಳಿ-ಮಳೆಗೆ ಗುಡ್ಡ ಕುಸಿದು ಮಣ್ಣು ಬಿದ್ದ ಕಾರಣ ಮೂರು ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದ್ದು ಲಕ್ಷಾಂತರ ನಷ್ಟ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಗುಡ್ಡದ ಬುಡದಲ್ಲಿ ನೀರು ತುಂಬಿದ್ದು ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇದೆ. ಇಲ್ಲಿನ ಸ್ಥಳೀಯ ನಿವಾಸಿಗಳು ಭಾರೀ ಆತಂಕದಿಂದ ದಿನದೂಡುತ್ತಿದ್ದಾರೆ.
ಮುಸ್ತಫ ಎಂಬವರು ಗುಡ್ಡದ ಮೇಲ್ಭಾಗದಲ್ಲಿ ಹೊಸ ಮನೆಯನ್ನು ಕಟ್ಟಿಸುತ್ತಿದ್ದು, ಮನೆಯ ಕಾಮಗಾರಿ ಭಾಗಶ: ಪೂತರ್ಿಗೊಂಡಿದೆ. ಆದಿತ್ಯವಾರ ರಾತ್ರಿ ಸುರಿದ ಭಾರೀ ಗಾಳಿ-ಮಳೆಗೆ ಗುಡ್ಡ ಕುಸಿಯತೊಡಗಿದ್ದು ಮನೆಯ ಹಿಂಬದಿಯೂ ಕುಸಿದು ಕೆಳಕ್ಕೆ ಬಿದ್ದಿದೆ. ಕಾಮಗಾರಿಗೆ ತಂದಿರಿಸಿದ್ದ ಕಲ್ಲು, ಸಿಮೆಂಟ್ ಬ್ರಿಕ್ಸ್, ಕಿಟಕಿ, ಬಾಗಿಲು ಕೂಡಾ ಹಾನಿಗೊಂಡಿದ್ದು ಭಾರೀ ನಷ್ಟ ಅನುಭವಿಸಿದ್ದಾರೆ.
ಕೆಳಗಡೆ ವೇದಾವತಿ ಎಂಬವರ ಮನೆಯಿದ್ದು, ಈ ಮನೆಯೂ ಗುಡ್ಡ ಕುಸಿತದಿಂದ ಹಾನಿಗೊಳಗಾಗಿದೆ. ಪಕ್ಕದಲ್ಲಿರುವ ರಹೀಂ ಎಂಬವರ ಮನೆಯೂ ಗುಡ್ಡ ಕುಸಿತಕ್ಕೆ ತುತ್ತಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮುಸ್ತಫ, ವೇದಾವತಿ ಹಾಗೂ ರಹೀಂ ಬಡಕುಟುಂಬದ ಹಿನ್ನೆಲೆಯನ್ನು ಹೊಂದಿದ್ದು ಕಷ್ಟಪಟ್ಟು ಸಾಲಸೋಲ ಮಾಡಿ ಇಲ್ಲಿ ಮನೆ ನಿಮರ್ಿಸಿದ್ದರು.
ಶಾಂತಿಗುಡ್ಡೆ ಪ್ರದೇಶದಲ್ಲಿ ಪ್ರತೀವರ್ಷ ಮಳೆಗೆ ಏನಾದರೂ ಅನಾಹುತ ಸಂಭವಿಸುತ್ತಲೇ ಇದ್ದರೂ ಇಲ್ಲಿಗೆ ಜಿಲ್ಲಾಡಳಿತ, ಸ್ಥಳೀಯಾಡಳಿತದ ಅಧಿಕಾರಿಗಳು ಭೇಟಿ ಕೊಡುವುದಿಲ್ಲ. ಮಳೆಯ ರಭಸಕ್ಕೆ ಇಲ್ಲಿ ವಾಸಿಸುತ್ತಿರುವ ಜನರು ನೆಲೆ ಕಳೆದುಕೊಳ್ಳುವ ಭೀತಿ ಎದುರಾಗಿದ್ದು ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ.





