ಕೈಕಂಬ: ಸಮಸ್ತ ಕೇರಳ ಜಂಇಯತುಲ್ ಉಲಮಾ ಇದರ ಅಂಗ ಸಂಸ್ಥೆ ವಿಜ್ಞಾನ,ವಿನಯ,ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ವಿಜಯದ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಎಸ್.ಕೆ.ಎಸ್.ಎಸ್.ಎಫ್ ತನ್ನ 27ವರ್ಷಗಳನ್ನು ಯಶಸ್ವಿಯಾಗಿ ಹಿಂದಿಕ್ಕಿ 28 ನೇ ವರ್ಷಕ್ಕೆ ಕಾಲಿಡುತ್ತಿರುವ ಸುಸಂದರ್ಬದಲ್ಲಿ ಎಸ್.ಕೆ.ಎಸ್.ಎಸ್.ಎಫ್ ಕಾಂಜಿಲಕೊಡಿಯಲ್ಲಿ ಇಂದು ಜಾಮತ್ ಅಧ್ಯಕ್ಷರಾದ ಅಹ್ಮದ್ ಬಾವ ಕಾಂಜಿಲಕೊಡಿಯವರ ಅಧ್ಯಕ್ಷತೆ ಯಲ್ಲಿ . ಧ್ವಜರೋಹಣವನ್ನು ಗುರುಪುರ ರೇಂಜ್ ಜಂಇಯತುಲ್ ಮುಹಲ್ಲಿಮೀನ್ ಇದರ ಕೊಶಾಧಿಕಾರಿ ಅಲ್ ಹಾಜ್ ಒಂ ಆದಂ ಉಸ್ತಾದ್ ರವರು ನಿರ್ವಹಿಸಿದರು ಉದ್ಘಾಟಿಸಿ ಸುನ್ನತ್ ಜಾಮಾತಿನ ಆದರ್ಶಗಳ ಬಗ್ಗೆ ಮಾತಡಿದರು.

IMG-20170219-WA0089ಅಲ್ಲದೆ ಅಹ್ಮದ್ ಬಾವರವರು ಮಾತಾಡಿ ಯುವ ಜನತೆ ಎಸ್.ಕೆ.ಎಸ್.ಎಸ್.ಎಫ್ ನಂತಹ ಉತ್ತಮ ಸಂವಹನೆಯೊಂದಿಗೆ ಕೈ ಜೋಡಿಸಿ ಸಮಾಜಮುಕಿ ಕಾರ್ಯ ಚಟುವಟಿಕೆ ಮಾಡಬೇಕೆಂದು ಕರೆ ನೀಡಿದರು ಕಾಂಜಿಲಕೊಡಿ ಮಾಜಿ ಅಧ್ಯಕ್ಷ ಹಸನಬ್ಬ ನೂಯಿ,ಕೊಶಧಿಕಾರಿ ಏ ಹಾರಿಸ್,ಖತೀಬ್ ಉಸ್ತಾದ್ ಮುಹಿದ್ದೀನ್ ಸಹದಿ,ಸಿದ್ದಿಕ್ ದಾರಿಮಿ ಅಸೈಗೊಳಿ,ಸಿದ್ದಿಕ್ ದಾರಿಮಿ ಕಿನ್ಯ,ಉಸ್ಮಾನ್ ಮುಸ್ಲಿಯಾರ್ ಕಾಂಜಿಲಕೊಡಿ,ಎಸ್.ಕೆ.ಎಸ್.ಎಸ್.ಎಫ್ ವಲಯ ಅಧ್ಯಕ್ಷ ಮೊಹಮ್ಮದ್ ಕುಂಞಿ ಮಾಸ್ಟರ್,ಅಬ್ದುಲ್ ಜಬ್ಬಾರ್ ಪನೊಲಿಪಾದೆ,ಶೇರಿಪ್ ಪೊನ್ನೆಲ,ಶಾಫಿ ಕಳಸಗುರಿ,ಅಬ್ದುಲ್ ಅಝೀಝ್,ನೌಫಲ್ ಕೊಡಿಬೆಟ್ಟು,ಪುತ್ತುಮೊನು,ತೌಸೀಫ್,ರಶೀದ್ ಜುಬೈಲ್,ಮದ್ರಸ ವಿದ್ಯಾರ್ಥಿಗಳು ಪಾಲುಗೊಂಡಿದ್ದರು.ಅಡ್ಡೂರು ಕ್ಲಷ್ಟರ್ ಅಧ್ಯಕ್ಷ ಹಾರಿಸ್ ಕಳಸಗುರಿ ಕಾರ್ಯಕ್ರಮ ನಿರುಪಿಸಿದರು.

By Suddi9

Leave a Reply

Your email address will not be published. Required fields are marked *