ಕೈಕಂಬ:ಆಲ್‍ಕಾರ್ಗೋ ಲೋಜಿಸ್ಟಿಕ್, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ,ಗ್ರಾಮ ಪಂಚಾಯತ್ ಮತ್ತು ಯುವಕ ಮಂಡಲ(ರಿ), ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ಸೂರಿಂಜೆ ಇವರ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಹಾಗೂ ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ ,ಮಂಗಳೂರು ಇವರ ಸಹಯೋಗದೊಂದಿಗೆ ಸೂರಿಂಜೆ ಸರಕಾರಿ ಪ್ರೌಢಶಾಲೆ ಯಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ದಂತ ಚಿಕಿತ್ಸಾ ಶಿಬಿರವು ಫೆ.20ರಂದು ಜರಗಿತು.
ಕಾರ್ಯಕ್ರಮವು ಶಾಲಾ ಮಕ್ಕಳ ಪ್ರಾರ್ಥನೆಯೋದಿಗೆ ಪ್ರಾರಂಭಗೊಂಡಿತು. ಪ್ರಜ್ಞಾ ಸಲಹಾ ಕೇಂದ್ರದ ಯೋಜನೆಯ ಸಂಯೋಜಕರಾದ .ವಿಲಿಯಂ ಸಾಮ್ಯುವೆಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರದ ಉದ್ಘಾಟನೆಯನ್ನು ಆಲ್‍ಕಾರ್ಗೋ ಲೋಜಿಸ್ಟಿಕ್ ಸಂಸ್ಥೆಯ ಸಿ.ಎಸ್.ಆರ್ ಮ್ಯಾನೇಜರ್ ಸುರೇಂದ್ರ ಶೆಟ್ಟಿ ಇವರು ನೆರವೇರಿಸಿ ಸಂಸೆÀ್ಥಯ ಕೆಲಸ ಹಾಗೂ ಶಿಬಿರದ ಅವಶ್ಯಕತೆಗಳ ಬಗ್ಗೆ ವಿವರಿಸಿದರು. ಸೂರಿಂಜೆ ಪಂಚಾಯತ್ ಅಧ್ಯಕ್ಷೆ ಕಸ್ತೂರಿ ದಯಾನಂದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಹಾಗು ಕೆ.ಎಂ.ಸಿ ಆಸ್ಪತ್ರೆ ಶಿಬಿರದ ಸಂಯೋಜಕರಾದ .ಹರ್ಬರ್ಟ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು .ಸಭೆಯಲ್ಲಿ ಶಾಲಾ ಶಿಕ್ಷಕರು, ಆಲ್‍ಕಾರ್ಗೋ ಲೋಜಿಸ್ಟಿಕ್ ಹಾಗೂ ಪ್ರಜ್ಞಾ ಸಲಹಾ ಕೇಂದ್ರದ ಕಾರ್ಯಕರ್ತರು ಉಪಸ್ಥಿತರಿದ್ದರು.ಮಕ್ಕಳು ಹಾಗೂ ಸಮುದಾಯದ ಜನರು ಈ ಶಿಬಿರದ ಪ್ರಯೋಜನ ವನ್ನು ಪಡೆದುಕೊಂಡರು.

