ಶಾಲಾ ವಾಕ್ ಶ್ರವಣ ತರಬೇತಿ ಕೇಂದ್ರಕ್ಕೆ ರೂ.50,000/- ಮೌಲ್ಯದ ಸಾಮಾಗ್ರಿ ನೀಡುವ ಭರವಸೆ.

ವಾಮಂಜೂರು:ಫೆ.20ನೇ ಸೋಮವಾರ ಪೂರ್ವಾಹ್ನ 10 ಗಂಟೆಗೆ ಲಯನ್ಸ್ ಕ್ಲಬ್ ಇಂಟರ್‍ನ್ಯಾಷನಲ್ ಜಿಲ್ಲೆ 317-ಡಿ ರೀಜನ್ III ವಲಯ 1ರ ಗವರ್ನರ್ ಲಯನ್ ಎಂ.ಅರುಣ್ ಶೆಟ್ಟಿ ಹಾಗೂ ಲಯನ್ ಎಂ ಇಂದಿರಾ ಅರುಣ್ ಶೆಟ್ಟಿ, ವಿಕಲ ಚೇತನ ಮಕ್ಕಳ ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆಗೆ ಭೇಟಿ ನೀಡಿದರು. ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್ ಬೈಲು, ಇದರ ಈಗಿನ ಅಧ್ಯಕ್ಷ ಲಯನ್ ಪ್ರದೀಪ್ ಆಳ್ವ ವಿಕಲ ಚೇತನ ಮಕ್ಕಳಿಗಾಗಿ ರೂ.2 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿಕೊಟ್ಟಿರುವ ಆರ್ಟ್ ಗ್ಯಾಲರಿಯನ್ನು ಜ್ಯೋತಿ ಬೆಳಗುವ ಮೂಲಕ ಅರ್ಪಿಸಿದರು. ಶಾಲಾ ಕಾರ್ಯ ಚಟುವಟಿಕೆಯನ್ನು ಈ ಹಿಂದೆ 3 ಬಾರಿ ಶಾಲೆಗೆ ಭೇಟಿ ನೀಡಿ ವೀಕ್ಷಿಸಿದ್ದು ಇದೀಗ ಲಯನ್ಸ್ ಗವರ್ನರ್ ನೆಲೆಯಲ್ಲಿ ಆಗಮಿಸಿದ ಬಗ್ಗೆ ಸಂತಾಸ ವ್ಯಕ್ತ ಪಡಿಸಿದರು. ದಿವಂಗತ ಶ್ರೀಮತಿ ಮೋಹಿನಿ ಅಪ್ಪಾಜಿ ನಾೈಕ್‍ರವರ ಸಮಗ್ರ ಶಿಕ್ಷಣದ ಪರಿಕಲ್ಪನೆಯಿಂದ ಅದೆಷ್ಟೋ ವಿಕಲ ಚೇತನ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಹೋಗಲು ಸಾಧ್ಯವಾಗಿದೆಯೆಂದು ತಿಳಿಸಿದರು. ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಶಾಲೆಯು ಸಮುದಾಯವನ್ನು ಶಾಲಾ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್‍ನ ಪ್ರಜೋಷ್ ಕುಮಾರ್ ಶಾಲೆಗೆ ಒಂದು ಗಾಲಿ ಕುರ್ಚಿ ಹಾಗೂ 2 ಫ್ಯಾನ್‍ಗಳನ್ನು ನೀಡಿದರು. ಶಾಲಾ ಮಕ್ಕಳಿಗೆ ಸಿಹಿತಿಂಡಿಯನ್ನು ಹಂಚಿದರು.

IMG_20170220_161800

ಶಾಲೆಯ ವಾಕ್ ಶ್ರವಣ ವಿಭಾಗಕ್ಕೆ ಅಗತ್ಯವಿರುವ ಸಾಧನಗಳ ಬಗ್ಗೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಅಶೋಕ್ ಕುಮಾರ್‍ರವರು ರೂ.50000/-ದ ಬೇಡಿಕೆಯನ್ನು ಸಲ್ಲಿಸದರು. ಇದಕ್ಕೆ ಸ್ಪಂದಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರದೀಪ್ ಆಳ್ವ ಹಾಗೂ ಪದಾದಿಕಾರಿಗಳು ಸೌಲಭ್ಯ ಒದಗಿಸಿ ಕೊಡುವ ಬಗ್ಗೆ ಭರವಸೆ ನೀಡಿದರು.

ಶಾಲಾ ಆಡಳಿತಾಧಿಕಾರಿ ಶ್ರೀ ಗಣೇಶ್ ಭಟ್ ವಿ. ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್ ಬೈಲ್ ಅಶಕ್ತ ಮಕ್ಕಳಿಗಾಗಿ ನೀಡುತ್ತಿರುವ ಸಹಾಯದ ಬಗ್ಗೆ ತಿಳಿಸುತ್ತಾ ಈ ಸಹಾಯವು ಅತ್ಯಂತ ಪ್ರಾಮಾಣಿಕವಾಗಿದ್ದು ವಿಕಲ ಚೇತನರ ಏಳಿಗೆಯಿಂದ ದೇವರನ್ನು ತಲುಪುವ ಸೇವಾ ಭಾಗ್ಯವೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಲಯನ್ ಪ್ರದೀಪ್ ಆಳ್ವ, ಲಯನ್ ಚಂದ್ರಹಾಸ್ ಶೆಟ್ಟಿ, ಲಯನ್ ಮೋಹನ್ ಕೊಪ್ಪಲ್, ಲಯನ್ ಕರುಣಾಕರ ಶೆಟ್ಟಿ, ಲಯನ್ ಪ್ರಜೋಷ್, ಲಯನ್ ಬಿ.ಕೆ.ಶರ್ಮ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *