ಬಂಟ್ವಾಳ: ತುಂಬೆ ಡ್ಯಾಂ ನೀರು ಸಂಗ್ರಹಿಸಿರುವ ಬಗ್ಗೆ ಹೈಕೋರ್ಟ್‍ನಲ್ಲಿ ಸಜೀಪ ಗ್ರಾಮದ ಎನ್.ಕೆ.ಇದಿನಬ್ಬ ಅವರು ಹೈಕೋರ್ಟ್ ನ್ಯಾಯಾವಾದಿ ಕೃಷ್ಣಮೂರ್ತಿ ಡಿ. ಅವರ ಮೂಲಕ ದಾವಿಹೂಡಿ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್‍ಅವರು ಫೆ.16ರಂದು ವಿಚಾರಣೆ ನಡೆಸಿ ನಗರಪಾಲಿಕೆ ಹಾಗೂ ದ.ಕ.ಜಿಲ್ಲಾ„ಕಾರಿಗೆ ಸ್ಪಷ್ಟ ಆದೇಶ ನೀಡಿ ರೈತರಿಗೆ ಬೆಳೆ ಪರಿಹಾರ ಸಹಿತ ಭೂಸ್ವಾದೀನ ಮಾಡಿ ರೈತರ ಸಮಕ್ಷಮ ಪುನಃ ಸರ್ವೆ ನಡೆಸಿ ಒಂದು ತಿಂಗಳೊಳಗೆ ಕೋರ್ಟ್‍ಗೆ ಪೂರ್ಣ ಮಾಹಿತಿ ನೀಡುವಂತೆ ಸ್ಪಷ್ಟ ಆದೇಶ ನೀಡಿದೆ.ಈ ಹಿಂದೆ ಹೈಕೋರ್ಟ್ ನ್ಯಾಯವಾದಿಗಳಾದ ಎಸ್.ರಾಜಶೇಖರ ಮತ್ತು ಧನಂಜಯ ಇರುವೈಲುಗಳ ಮೂಲಕ ರೈತ ಸಂಘದ ಮನೋಹರ ಶೆಟ್ಟಿ,ಎಂ. ಸುಬ್ರಹ್ಮಣ್ಯ ಭಟ್,ಸುದೇಶ ಮಯ್ಯ ಅವರು ಜಂಟಿಯಾಗಿ ದಾವೆಹೂಡಿದ್ದು ಅವರ ದೂರನ್ನು ವಿಚಾರಿಸಿ ಹೈಕೋರ್ಟ್ ಇದೇ ಆದೇಶ ನೀಡಿದ್ದನ್ನು ಸ್ಮರಿಸಬಹುದು.

ಇನ್ನಾದರೂ ರೈತರ ಹಿತಾಶಕ್ತಿಯ ಬಗ್ಗೆ ಯೋಗ್ಯ ರೀತಿಯಲ್ಲಿ ಸ್ಪಂದಿಸಿ ರೈತರಿಗೆ ಸೂಕ್ತ ನ್ಯಾಯೋಚಿತ ಪರಿಹಾರ ನೀಡುವಲ್ಲಿ ನಮ್ಮ ಜನಪ್ರತಿನಿ„ಗಳು,ಜಿಲ್ಲಾಡಳಿತ,ನಗರ ಪಾಲಿಕೆ ಪ್ರಾಮಾಣಿಕತೆಯಿಂದ ಕೆಲಸ ಮಾಡಲಿ ಎಂಬುದಾಗಿ ರೈತ ಮುಖಂಡರಾದ ಮನೋಹರ ಶೆಟ್ಟಿ, ಎಂ.ಸುಬ್ರಹ್ಮಣ್ಯ ಭಟ್,ಎನ್.ಕೆ.ಇದಿನಬ್ಬ,ಸುದೇಶ ಮಯ್ಯ,ಶರತ್ ಕುಮಾರ್ ಒತ್ತಾಯಿಸಿದ್ದಾರೆ.



