ಬಂಟ್ವಾಳ: ಪುತ್ತೂರು ಶ್ರೀ ದೇವಿ ನೃತ್ಯಾರಾಧನಾ ಕಲಾಕೇಂದ್ರ ಅರ್ಪಿಸುವ ನೃತ್ಯಗುರು ರೋಹಿಣಿ ಉದಯ್ ಅವರ ಶಿಷ್ಯೆ ಕು|ಹರುಷ ಡಿ.ಎಸ್ ಅವರಿಂದ ಭರತನಾಟ್ಯ ರಂಗಪ್ರವೇಶ ನೃತ್ಯ ಹರ್ಷ ಕಾರ್ಯಕ್ರಮವು ಫೆ.19ರಂದು ಸಂಜೆ ಮಂಗಳೂರು ಪುರಭವನದಲ್ಲಿ ಜರಗಲಿದೆ.ಮಂಗಳೂರು ಸನಾತನ ನಾಟ್ಯಾಲಯದ ಮಾಟ್ಯಗುರು ವಿದುಷಿ ಶಾರದಾಮಣಿ ಶೇಖರ್ ಮತ್ತು ಪುತ್ತೂರು ವಿವೇಕಾನಂದ ಬಿ.ಎಡ್.ಕಾಲೇಜಿನ ಉಪನ್ಯಾಸಕಿ ವಿದುಷಿ ಡಾ|ಶೋಭಿತ ಸತೀಶ್ ರಾವ್ ಅವರು ದೀಪ ಪ್ರಜ್ವಲನೆ ಮಾಡಲಿರುವರು.
ಕೊಂಡೆವೂರು ಉಪ್ಪಳದ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ಚಚನ ನೀಡಲಿರುವರು. ಮಂಗಳೂರು ಶಾಸಕ ಜೆ.ಆರ್.ಲೋಬೋ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ,ಆಹಾರ ಸಚಿವ ಯು.ಟಿ.ಖಾದರ್,ಮಹಿಳಾ ಮತ್ತು ಮಕ್ಕಳಾಬಿವೃದ್ಧಿ ಸಚಿವೆ ಉಮಾಶ್ರೀ,ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ,ಪುತ್ತೂರು ಶಾಸಕಿ ಶಕುಂತಳಾ ಟಿ.ಶೆಟ್ಟಿ ಅವರು ಮುಖ್ಯ ಅತಿಥಿಗಲಾಗಿ ಭಾಗವಹಿಸುವರು. ಬೆಂಗಳೂರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಬಿ.ಎನ್.,ಕೆ.ಸಿ.ಆಳ್ವ ನರಿಂಗಾನ,ಪುತ್ತೂರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ|ವೀಣಾ ಸತ್ಯೇಂದ್ರ,ಪರಿಶಿಷ್ಟ ಜಾತಿ ಮತ್ತು ಪಂಗಡ ವಿಭಾಗದ ಅಧ್ಯಕ್ಷ ಪದ್ಮನಾಭ ನರಿಂಗಾನ ಅವರು ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದೆ.

