ಬಂಟ್ವಾಳ: ಸರಕಾರದ ಅನೇಕ ಯೋಜನೆಗಳು ಕೇವಲ ಕಾಟಾಚಾರಕ್ಕೆ ನಡೆಸಲ್ಪಡುತ್ತದೆ. ಅದರಲ್ಲಿ ಸಮಾಜದ, ಸಾರ್ವಜನಿಕರ ಸಹಭಾಗಿತ್ವ ಇರುವುದಿಲ್ಲ. ಆದರೆ ಬಂಟ್ವಾಳ ಪುರಸಭೆಯಿಂದ ನಡೆಯುತ್ತಿರುವ ನಿರ್ಮಲ ಬಂಟ್ವಾಳ ಸ್ವಚ್ಚ ಭಾರತ ಕಾರ್ಯಕ್ರಮ ಯಶಸ್ವಿ ಅನುಷ್ಠಾನದಲ್ಲಿ ನಡೆಯುತ್ತಿದೆ. ಇಂತಹ ವ್ಯವಸ್ಥೆಯ ಮೂಲಕ ಯೋಜನೆಗಳು ಜಾರಿಗೆ ಬಂದಾಗ ಅದು ಫಲ ನೀಡುತ್ತದೆ ಎಂದು ಬಂಟ್ವಾಳ ಎಸ್ವಿಎಸ್ ಕಾಲೇಜು ಉಪನ್ಯಾಸಕ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪೆÇ್ರ| ತುಕರಾಂ ಪೂಜಾರಿ ಹೇಳಿದರು.ಅವರು ಫೆ. 16ರಂದು ಬಡ್ಡಕಟ್ಟೆ ಸಂಕೀರ್ಣ ಮೈದಾನದಲ್ಲಿ ನಡೆದ ನಿರ್ಮಲ ಬಂಟ್ವಾಳ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಾಮಾಜಿಕ ಕೆಲಸದಲ್ಲಿ ಎಲ್ಲರ ಸಹಭಾಗಿತ್ವವನ್ನು ಪಡೆಯಬೇಕು. ನಾವು ಮಾಡಿಸಿದ್ದು ಎಂಬ ಚಿಂತನೆಗಿಂತ ಸರ್ವರ ಸಹಕಾರದಲ್ಲಿ ಆಗಿರುವುದು ಎಂಬುದು ಹೆಚ್ಚು ಸಮರ್ಥನೀಯ ಆಗುವುದು. ಪುರಸಭೆಯ ಅ„ಕಾರಿ, ಆಡಳಿತ, ಸಿಬಂದಿಗಳ ಸಹಭಾಗಿತ್ವದ ಜೊತೆಗೆ ಜನ ಸಾಮಾನ್ಯರನ್ನು ಅಳವಡಿಸಿಕೊಂಡು ನಡೆಯುವ ಕೆಲಸ ಹೆಚ್ಚು ಸಮರ್ಥನೀಯ ಆಗುವುದು. ತಹಶೀಲ್ದಾರ್, ಪೊಲೀಸ್ ಅ„ಕಾರಿ ವರ್ಗವನ್ನು ಬಳಸಿಕೊಂಡಾಗ ಯೋಜನೆಗೆ ಮಹತ್ವ ಬರುವುದು. ಸ್ವಚ್ಚತೆ ಎಂಬುದು ಒಮ್ಮೆ ಮನವರಿಕೆ ಮಾಡಿಸುವ ಕೆಲಸವಾಗಿ, ನಂತರದ ದಿನಗಳಲ್ಲಿ ಬದುಕಿನ ಒಂದು ಅಂಗವಾಗಿ ಮುಂದುವರಿಯಬೇಕು. ಪೊಲೀಸರು ಸಮವಸ್ತ್ರ ಧರಿಸಿ ಶಿಸ್ತಿನಿಂದ ಇರುವಂತೆ, ಸ್ವಚ್ಚತಾ ಕೆಲಸಕ್ಕೆ ಬರುವಾಗ ಅದಕ್ಕೆ ಪೂರಕ ಕ್ರಮದಲ್ಲಿ ಬಂದು ರಸ್ತೆ ಬದಿಯನ್ನು , ಮನೆ ವಠಾರವನ್ನು ಕಚೇರಿ ಸುತ್ತಮುತ್ತಲು ಸ್ವಚ್ಚತೆ ಮಾಡುವಂತೆ ಪ್ರೇರೇಪಿಸುವ ಪುರಸಭೆ ಅ„ಕಾರಿ ಸುಧಾಕರ್ ಅವರ 54ನೇ ವಾರದ ಕಾರ್ಯಕ್ರಮಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯು ಇಂತಹ ಕಾರ್ಯಕ್ರಮಗಳಿಗೆ ನಿರಂತರ ಸಹಾಯ, ಸಹಕಾರ ಪ್ರೋತ್ಸಾಹ ನೀಡುವುದು. ಸ್ವಚ್ಚತೆ ನಮ್ಮ ನಿತ್ಯದ ಆಚರಣೆ ಆಗಬೇಕು. ಬಂಟ್ವಾಳ ಯಾವ ರೀತಿಯಲ್ಲಿ ಪುರೋವೃದ್ದಿಯಾಗಬೇಕು ಎಂಬ ಚಿಂತನೆ ನಮ್ಮದಾಗಬೇಕು ಎಂದರು.ಪುರಸಭೆಯ ನಾಗರೀಕರು, ವ್ಯಾಪಾರಸ್ಥರು ಸಹಕರಿಸಿದರೆ ಬಂಟ್ವಾಳವನ್ನು ಸರ್ವಋತು ನಗರವಾಗಿ ಅಭಿವೃದ್ದಿಪಡಿಸಬಹುದು. ನಮ್ಮದೇ ಊರಿನ ನದಿಯ ನೀರನ್ನು ಸ್ವಚ್ಚವಾಗಿ ಇಡಲು ಜನರು ಸಹಕರಿಸಬೇಕು. ತ್ಯಾಜ್ಯ ಕಲುಷಿತವನ್ನು ನದಿಗೆ ಎಸೆಯಬಾರದು, ನದಿಯ ಹರಿಸಬಾರದು ಎಂಬುದಾಗಿ ಮನವಿ ಮಾಡಿದರು.ಇದೇ ಸಂದರ್ಭ ಪುರಸಭೆ ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ, ಲಯನ್ಸ್ ಕ್ಲಬ್ ಬಂಟ್ವಾಳ ಸಹಕಾರದಲ್ಲಿ ಸ್ವಚ್ಛ ಭಾರತ್ ಮಿಷನ್ ನಡಿ ಸ್ವಚ್ಛತಾ ಜಾಥಾವು ಬಡ್ಡಕಟ್ಟೆ ಪುರಸಭಾ ಸಂಕೀರ್ಣ ಮೈದಾನದ ತನಕ ನಡೆಯಿತು. ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ಜಗದೀಶ್ ಕುಂದರ್, ಗಂಗಾಧರ್ ಪೂಜಾರಿ, ಪ್ರವೀಣ್ ಕಿಣಿ, ಲೋಕೇಶ್ ಪೂಜಾರಿ, ಲಯನ್ಸ್ ಸ್ಥಾಪಕಾಧ್ಯಕ್ಷ ಡಾ| ವಸಂತ್ ಬಾಳಿಗ , ಲಯನ್ಸ್ ಕಾರ್ಯದರ್ಶಿ ಪದ್ಮನಾಭ ಆಚಾರ್, ಎಸ್ ಕೆಪಿಎ ವಲಯಾಧ್ಯಕ್ಷ ಸುಕುಮಾರ್ ಬಂಟ್ವಾಳ, ಕಾರ್ಯದರ್ಶಿ ಹರೀಶ್ ಕುಂದರ್ ಉಪಸ್ಥಿತರಿದ್ದರು.ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಸ್ವಾಗತಿಸಿದರು. ಪುರಸಭಾ„ಕಾರಿ ಸುಧಾಕರ್ ಪ್ರಸ್ತಾವನೆ ನೀಡಿದರು. ಸದಸ್ಯ ಪ್ರವೀಣ್ ಬಿ. ವಂದಿಸಿದರು. ಆರೋಗ್ಯಾ„ಕಾರಿ ರತ್ನಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

