ಬಂಟ್ವಾಳ: ತಾಲೂಕು ಸಜೀಪಮೂಡ ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಲ ಇಲ್ಲಿ ಫೆ.24ರಂದು ಮಹಾಶಿವರಾತ್ರಿ ಮತ್ತು ಮಾ.11 ರಂದು ವಾರ್ಷಿಕ ಮಹೋತ್ಸವ,ಪ್ರತಿಷ್ಠಾ ವರ್ಧಂತ್ಯುತ್ಸವವು ವಿವಿಧ ಸಾಂಸ್ಕøತಿಕ,ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಜರಗಲಿದ್ದು ಅದರ ಆಮಂತ್ರಣ ಪತ್ರವನ್ನು ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ ಅವರು ಬಿಡುಗಡೆಗೊಳಿಸಿದರು.

ಸಮಾರಂಭದಲ್ಲಿ ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್,ಎ.ಜಯಶಂಕರ ಬಾಶ್ರೀತ್ತಾಯ, ಬಿ.ದೇವಿಪ್ರಸಾದ್ ಪೂಂಜ,ಸುಬ್ರಾಯ ಜೋಶಿ,ರಮೇಶ ಸುವರ್ಣ,ವಾಸು ಗಟ್ಟಿ,ಚೆನ್ನಯ್ಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
