ಬಂಟ್ವಾಳ : ಎಸ್ಕೆಎಸ್ಸೆಸ್ಸೆಫ್ ಸೂರಿಕುಮೇರು-ಮಾಣಿ ಶಾಖೆಯ ಆಶ್ರಯದಲ್ಲಿ ಸಂಶುಲ್ ಉಲಮಾ ಹಾಗೂ ಅಗಲಿದ ಸಮಸ್ತ ನಾಯಕರ ಅನುಸ್ಮರಣೆ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಸೂರಿಕುಮೇರು ಎಚ್.ಪಿ. ಪೆಟ್ರೋಲ್ ಪಂಪ್ ಬಳಿಯ ಸಂಶುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಸಯ್ಯಿದ್ ಮುಝಮ್ಮಿಲ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುವಾಶಿರ್ವಚನಗೈದರು. ಅಬೂಬಕ್ಕರ್ ಸಿದ್ದೀಕ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಅಧ್ಯಕ್ಷತೆ ವಹಿಸಿದ್ದರು. ಹಾಫಿಳ್ ಇ.ಕೆ. ಅಬೂಬಕ್ಕರ್ ನಿಝಾಮಿ ಮಲೇಶಿಯಾ ಮುಖ್ಯ ಭಾಷಣಗೈದರು.

Soorikumeru 1
ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಪಿ.ಕೆ. ಆದಂ ದಾರಿಮಿ, ಮುಹಮ್ಮದ್ ಆಸಿಫ್ ಅಲ್-ಅಝ್‍ಹರಿ ಮಿತ್ತೂರು, ತುಂಬೆ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಕೆ.ಎಂ. ಅಬ್ದುಲ್ ಲತೀಫ್ ಫೈಝಿ, ಗಡಿಯಾರ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಟಿ.ಪಿ. ಜಮಾಲುದ್ದೀನ್ ದಾರಿಮಿ, ಪತ್ರಕರ್ತ ಲತೀಫ್ ನೇರಳಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎ. ಲತೀಫ್ ಸೂರಿಕುಮೇರು, ಪುತ್ತೂರು ಮದ್ರಸ ಮೆನೇಜ್‍ಮೆಂಟ್ ಅಧ್ಯಕ್ಷ ಮುಹಮ್ಮದ್ ಹನೀಫ್ ಸೂರಿಕುಮೇರು, ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಸೂರಿಕುಮೇರು, ಝಕರಿಯಾ ದಾರಿಮಿ ಪೆರ್ನೆ ಮೊದಲಾದವರು ಉಪಸ್ಥಿತರಿದ್ದರು.ಮುಹಮ್ಮದ್ ಮುಸ್ಲಿಯಾರ್ ಸ್ವಾಗತಿಸಿ, ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಮೂಸಾ ಕರೀಂ ವಂದಿಸಿದರು. ಕೆ.ಎಂ.ಎ. ಕೊಡಂಗಾಯಿ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ : ಸೂರಿಕುಮೇರು

By Suddi9

Leave a Reply

Your email address will not be published. Required fields are marked *