ಬಂಟ್ವಾಳ : ಮಂಜೇಶ್ವರ ಗೋವಿಂದ ಪೈ ಗಳು ಬಾಲ್ಯದಲ್ಲಯೇ ಸಂಧೋಧನಾ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದು ಪಂಡಿತ ಪರಂಪರೆಯಲ್ಲಿ ಔನತ್ಯಕ್ಕೇರಿದವರು. ಕಾಸರಗೋಡು ಕೇರಳಕ್ಕೆ ಸೇರುವುದನ್ನು ವಿರೋಧಿಸಿ ಡಾಕ್ಟರೆಟ್ ಪದವಿಯನ್ನು ನಯವಾಗಿ ತಿರಸ್ಕರಿಸಿದ್ದರು. ಪಂಜೆಯವರ ಸಮಕಾಲೀನರಾಗಿ 65 ವರ್ಷಗಳು ಕನ್ನಡ ಸೇವೆ ಮಾಡಿ ಭಾಷೆ ಮತ್ತು ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರ ಇಂಗ್ಲೀಷ್ ಸಾಹಿತ್ಯದ ಅನುವಾದ ವಿಭಿನ್ನವಾಗಿದ್ದು ಹೊಸ ಪದ್ಯಪ್ರಕರವನ್ನು ಕನ್ನಡಕ್ಕೆ ತಂದು ಕೊಟ್ಟರು. ಅವರ ಬರಹಗಳು ಹಾಗೂ ಅನುವಾದಗಳು ಅನೇಕ ಸಾಹಿತಿಗಳಿಗೆ ಪ್ರೇರಣೆಯಾಗಿವೆ ಎಂದು ಬೆಟ್ಟಂಪಾಡಿ ಸರಕಾರಿ ಕಾಲೇಜಿನ ಪ್ರಾಚಾರ್ಯ ವರದರಾಜ ಚಂದ್ರಗಿರಿ ಹೇಳಿದರು.
ಅವರು ಬಿ.ಸಿ ರೋಡಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಬಂಟ್ವಾಳ ತಾಲೂಕು ಕ.ಸಾ.ಪ ಆಶ್ರಯದಲ್ಲಿ ಏರ್ಪಡಿಸಲಾದ ಅಮ್ಮೆಂಬಳ ಶಂಕರನಾರಾಯಣ ನಾವಡರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗೋವಿಂದ ಪೈಗಳ ಸಂಶೋಧನೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
Untitled-1
ಹಿರಿಯ ಸಾಹಿತಿ ಪಡಾರು ಮಹಾಬಲೇಶ್ವರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಹಲವು ಭಾಷೆಗಳನ್ನು ಬಲ್ಲ ಪೈ ಯವರು ಪದಗಳ ನಿಷ್ಪತ್ತಿಯನ್ನು ಆಮೂಲಾಗ್ರವಾಗಿ ಅದ್ಯಯನ ಮಾಡಿ ದಾಖಲಿಸಿದ್ದರು ಎಂದು ತಿಳಿಸಿದರು. . ಅಮ್ಮೆಂಬಳ ಶಂಕರ ನಾರಾಯಣ ನಾವಡರ ಬಗ್ಗೆ ಸಾಧನೆಯ ಬಗ್ಗೆ ಪ್ರೊ. ಎ.ವಿ.ನಾವಡ ಮಾತನಾಡಿದರು. ವೇದಿಕೆಯಲ್ಲಿ ಅಮ್ಮೆಂಬಳರ ಕಿರಿಯ ಸಹೋದರ ಸುಬ್ಬಣ್ಣ ನಾವಡ ಉಪಸ್ಥಿತರಿದ್ದರು. ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ.ಎ.ಮೋಹನ ಕುಂಟಾರು ಪ್ರಸ್ತಾವನೆಗೈದು, ಕಾರ್ಯದರ್ಶಿ ಅಜೆಕಳ ಗಿರೀಶ್ ಭಟ್ ನಿರೂಪಿಸಿ, ಕೊಳಕೆ ಗಂಗಾಧರ ಭಟ್ ವಂದಿಸಿದರು.

By Suddi9

Leave a Reply

Your email address will not be published. Required fields are marked *