ಬಂಟ್ವಾಳ :- ಕೈಗೊಂಡ ಕಾರ್ಯವನ್ನು ಭಗವಂತನ ಸೇವೆ ಎಂದು ಮುನ್ನಡೆಸಿಕೊಂಡು ಹೋದಾಗ ಯಾವುದೇ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು ಹೇಳಿದರು.
ಅವರು ಪಾಣೆಮಂಗಳೂರು ಮೆಲ್ಕಾರ್‍ನಲ್ಲಿ ಎಡನೀರು ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ವತಿಯಿಂದ ಏರ್ಪಡಿಸಲಾದ ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಆರ್ಶೀವಚನ ನೀಡಿದರು. ಎಡನೀರು ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಎಡನೀರು ಜೋಡಾಟ ಕಾರ್ಯಕ್ರಮ ಫೆ.16 ರಂದು ನಡೆಯಲಿದೆ. ಈ ವರ್ಷ ಶ್ರೀ ಮಠದ ಮೇಳದಿಂದ ಯಕ್ಷಗಾನ ಸಪ್ತಾಹ ಅಲ್ಲಲ್ಲಿ ನಡೆಯುತ್ತಿದೆ ಕಲಾಭಿಮಾನಿಗಳ ಸಹಕಾರದಿಂದ ಚೆನ್ನಾಗಿ ನೆರವೇರಲಿ ಎಂದು ಶುಭ ಹಾರೈಸಿದರು
ಯಕ್ಷಗಾನ ಕಲೆ ಸೃಜನಾತ್ಮಕ ವಾದ ಅಂಶಗಳಿಂದ ಕೂಡಿದ್ದು ಸಮೃದ್ಧವಾದ ಕಲೆಯಾಗಿ ಬೆಳೆದಿದೆ. ಕರಾವಳಿಯ ಸಂಸ್ಕøತಿಯ ಭಾಗವಾಗಿ ಯಕ್ಷಗಾನವು ಜನಜೀನವನದಲ್ಲಿ ಬೆಸೆದುಕೊಂಡಿದೆ. ಪೌರಾಣಿಕ ಪ್ರಸಂಗಗಳನ್ನು ಯಕ್ಷಗಾನ ಪ್ರಿಯರು ಇಂದಿಗೂ ಆಸ್ವಾದಿಸುತ್ತಾರೆ ಎಂದು ನ್ಯಾಯವಾದಿ ಅಶ್ವನಿ ಕುಮಾರ್ ರೈ ಹೇಳಿದರು.

Untitled-1
ವೇದಿಕೆಯಲ್ಲಿ ಅತಿಥಿಗಳಾಗಿ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಕೆ.ಎಸ್ ಸುಧಾಕರ, ,ಉದ್ಯಮಿ ಮಾವೆ ದಿನಕರ್ ಭಟ್ , ಗೌರವಾಧ್ಯಕ್ಷ ಎ.ಸಿ. ಭಂಡಾರಿ ಉಪಸ್ಥಿತರಿದ್ದರು. ಯಕ್ಷಗಾನ ಸಪ್ತಾಹ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಸ್ತಾವನಗೈದು ಸ್ವಾಗತಿಸಿದರು. ಉಪನ್ಯಾಸಕ ವಿ.ಸು.ಭಟ್ ನಿರೂಪಿಸಿ, ಮಂಜು ವಿಟ್ಲ ವಂದಿಸಿದರು. ಬಳಿಕ ಶೂರ್ಪಣಖಾ ಇಂದ್ರಜಿತು ಪ್ರಸಂಗ ಪ್ರದರ್ಶನಗೊಂಡಿತು.

By Suddi9

Leave a Reply

Your email address will not be published. Required fields are marked *