ಬಂಟ್ವಾಳ: ಕಾನೂನು ತೊಡಕು ಹಾಗೂ ಅ„ಕಾರಶಾಹಿಗಳ ಎಡವಟ್ಟಿನಿಂದಾಗಿ ಪದವಿ ಪೂರ್ವ ಕಾಲೇಜು ಉಪಾನ್ಯಾಸಕರ ವೇತನ ವಿಳಂಬವಾಗಿದೆ. ಈ ಬಗ್ಗೆ ಸವಿಸ್ತಾರ ವಿವರ ಪಡೆದು ಸಂಬಂಧಿತರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.ಅವರು ಶನಿವಾರ ಬಂಟ್ವಾಳ ತಾಲೂಕು ಸಿದ್ಧಕಟ್ಟೆಯಲ್ಲಿ ಜರಗಿದ ಗಾಡಿಪಲ್ಕೆ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ,ಸಿದ್ಧಕಟ್ಟೆ ಸ.ಪ.ಪೂ.ಕಾಲೇಜಿನ ನೂತನ ಕ್ರೀಡಾಂಗಣ, ಕಾಲೇಜು ಕಟ್ಟಡದ ಮೆಟ್ಟಿಲು ಸಮರ್ಪಣೆ ಹಾಗೂ ಹರ್ಷಲಿ ಸಭಾಂಗಣದಲ್ಲಿ ಜರಗಿದ ನಿವೃತ್ತಿಗೊಳ್ಳಲಿರುವ ಪ್ರಾಂಶುಪಾಲ ಎನ್.ಪದ್ಮನಾಭ ರೈ ಅವರ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರಿ ಸಂಸ್ಥೆಯಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಾಗ ಎಲ್ಲರ ಗೌರವ, ಪ್ರೀತಿ, ಅಭಿಮಾನ ದೊರಕುತ್ತದೆ. ಪದ್ಮನಾಭ ರೈ ಅವರು ಸಜ್ಜನಿಕೆಯಿಂದ ಸಹೋದ್ಯೋಗಿಗಳು,ವಿದ್ಯಾರ್ಥಿಗಳು ಮತ್ತು ಊರವರು ಹಾಗೂ ಆಡಳಿತದೊಂದಿಗೆ ಹೊಂದಾಣಿಕೆಯಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ತನ್ನ ಸಂಸ್ಥೆಯ ಅಭಿವೃದ್ಧಿಗೆ ಕಾರಣರಾಗಿ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಅಳದಂಗಡಿ ಸ.ಪ.ಪೂ ಕಾಲೇಜು ಪ್ರಾಂಶುಪಾಲ ರತ್ನಾಕರ ಶೆಟ್ಟಿ ಅವರು ಅಭಿನಂದನಾ ಭಾಷಣ ಮಾಡಿ ಮಾತನಾಡಿ 34 ವರ್ಷಗಳ ಕರ್ತವ್ಯದಲ್ಲಿ 18 ವರ್ಷ ಪ್ರಾಂಶುಪಾಲರಾಗಿ ವಿದ್ಯಾರ್ಥಿಗಳಿಗೆ ಸದಾ ಪೆÇ್ರೀತ್ಸಾಹ ನೀಡಿ ಅವರ ಕೀಳರಿಮೆಯನ್ನು ಹೋಗಲಾಡಿಸಿ ಅವರ ಗುಣಮಟ್ಟವನ್ನು ಉನ್ನತೀಕರಿಸುವ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧವನ್ನು ಜವಾಬ್ದಾರಿಯುತವಾಗಿ ಸಮರ್ಥವಾಗಿ ನಿಭಾಯಿಸಿದ ಗೌರವ ಪಡೆದವರು. ಅವರ ಸೇವೆ ರಾಷ್ಟ್ರದ ಸಂಪತ್ತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಉಪನ್ಯಾಸಕಿ ಸುಮ ಸಮ್ಮಾನಿತರನ್ನು ಪರಿಚಯಿಸಿದರು. ಸಮ್ಮಾನಕ್ಕೆ ಪ್ರತಿಕ್ರಿಯಿಸಿದ ಪದ್ಮನಾಭ ರೈ ಅವರು ಎಲ್ಲರ ಸಹಕಾರದಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದ್ದು ವೃತ್ತಿ ಜೀವನ ಸಂತೃಪ್ತಿ ತಂದಿದೆ. ಸಿದ್ಧಕಟ್ಟೆಯಲ್ಲಿ ಪ್ರೌಢಶಾಲೆ,ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು ಎಲ್ಲಾ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿದ್ದು ಇದನ್ನು ಊರವರು ಸದುಪಯೋಗಪಡಿಸಿಕೊಳ್ಳಬೇಕು. ಈ ಶಿಕ್ಷಣ ಸಂಸ್ಥೆಗಳು ಊರಿಗೆ ಕಿರೀಟಪ್ರಾಯವಾಗುವಂತೆ ಪ್ರಕಾಶಿಸಬೇಕು.
ಬಂಟ್ವಾಳ ನಗರಾಭಿವೃದ್ಧಿ ಪ್ರಾ„ಕಾರ ನಿಕಟ ಪೂರ್ವ ಅಧ್ಯಕ್ಷ ಪಿಯೂಸ್ ಎಲ್.ರೊಡ್ರಿಗಸ್, ಎಪಿಎಂಸಿ ಸದಸ್ಯ ಪದ್ಮರಾಜ ಬಲ್ಲಾಳ್ ಮಾವಂತೂರು, ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಅರ್ಕಕೀರ್ತಿ ಇಂದ್ರ, ಗ್ರಾ.ಪಂ.ಅಧ್ಯಕ್ಷೆ ಗುಲಾಬಿ ಶೆಟ್ಟಿ,ಉಪಾಧ್ಯಕ್ಷ ಸತೀಶ್ ಪೂಜಾರಿ,ಗ್ರಾ.ಪಂ.ಮಾಜಿ ಅಧ್ಯಕ್ಷ ಶಿವಾನಂದ ರೈ, ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ,ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಸರಸ್ವತಿ ಬಿ., ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ದೇವಪ್ಪ ಕರ್ಕೇರಾ, ನಾರಾಯಣ ನಾಯಕ್, ಉಸ್ಮಾನ್,ಭುಜಬಲಿ ಕಂಬಳಿ, ಲೋಕೇಶ್ ಶೆಟ್ಟಿ,ಲೋಕಯ್ಯ ಗಾಡಿಪಲ್ಕೆ,ಸ.ಪ್ರ.ದ. ಕಾಲೇಜು ಪ್ರಾಂಶುಪಾಲ ಪೆÇ್ರ.ಸತ್ಯನಾರಾಯಣ ಭಟ್,ಪ್ರೌಢಶಾಲಾ ಉಪಪ್ರಾಂಶುಪಾಲ ರಮಾನಂದ,ಗುತ್ತಿಗೆದಾರರಾದ ಬಾಬು ರಾಜೇಂದ್ರ ಶೆಟ್ಟಿ,ಮಧ್ವರಾಜ್ ಜೈನ್, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ಇಂಜಿನಿಯರ್ ಜಗದೀಶ್, ಕ್ಷೇತ್ರ ಶಿಕ್ಷಣಾ„ಕಾರಿ ಲೋಕೇಶ್,ಸಿದ್ಧಕಟ್ಟೆ ಹಾ.ಉ.ಸಂಘದ ಕಾರ್ಯದರ್ಶಿ ರತ್ನಕುಮಾರ ಚೌಟ,ಪ್ರಾಂಶುಪಾಲ ಪದ್ಮನಾಭ ರೈ ಅವರ ಪತ್ನಿ ಸುಮತಿ ಪಿ.ರೈ,ಪುತ್ರಿ ಭವಿಷ್ಯ ರೈ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪದ್ಮನಾಭ ರೈ ಅವರು ಕಾಲೇಜಿಗೆ ಕೊಡಮಾಡಿದ ಶುದ್ಧ ಕುಡಿಯುವ ನೀರಿನ ಸೌಲಭ್ಯದ ಕೀಲಿಕೈಯನ್ನು ಹಿರಿಯ ಉಪನ್ಯಾಸಕರಿಗೆ ಹಸ್ತಾಂತರಿಸಿದರು.
ಉಪನ್ಯಾಸಕ ಶೀನಪ್ಪ ಅವರು ಸ್ವಾಗತಿಸಿದರು.ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಪ್ರಸ್ತಾವಿಸಿದರು.ಉಪನ್ಯಾಸಕಿ ಮಮತಾ ವಂದಿಸಿದರು. ಸಂಜಯ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
