ಮುಂಬಯಿ: ಉಪನಗರ ಬೋರಿವಿಲಿ ಪೂರ್ವದ ದೇವುಲಪಾಡಾದ ಇಲ್ಲಿ ತುಳುನಾಡ ವೀರ ದೈವಗಳಾದ ಕೋಟಿ-ಚೆನ್ನಯರನ್ನು ಒಳಗೂಡಿಕೊಂಡಿರುವ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಇಂದಿಲ್ಲಿ ಬುಧವಾರ ನಲ್ವತ್ತ ಮೂರನೇ ವಾರ್ಷಿಕ ಬೈದರ್ಕಳ ನೇಮೋತ್ಸವ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಶೇಖರ್ ಇಂದು ಸಾಲಿಯಾನ್ ಕಟಪಾಡಿ ನೇತೃತ್ವದಲ್ಲಿ ನಡೆಸಲ್ಪಟ್ಟಿತು.

Brama Baidarkala Borivali Nema-9

ಆ ಪ್ರಯುಕ್ತ ಅಶ್ವತ್ತದಡಿ ಗರಡಿಯಲ್ಲಿ ಕಳೆದ ಮಂಗಳವಾರ ಅಪರಾಹ್ನ ಕಲಶ ಪ್ರತಿಷ್ಠೆ, ರಾತ್ರಿ ಅಗಲ ತಂಬಿಲ ನಂತರ ಬೈದರ್ಕಳ ದರ್ಶನ ನಡೆಸಲಾಗಿದ್ದು ಇಂದಿಲ್ಲಿ ಬುಧವಾರ ಬೆಳಿಗ್ಗೆ ಗರಡಿಯಲ್ಲಿ ಗಣಹೋಮ, ದುರ್ಗಾಪೂಜೆ, ರಾತ್ರಿ ಬೈದರ್ಕಳ ನೇಮ (ಕೋಲ), ಮಾಯಿಂದಲೆ ಮತ್ತು ಜೋಗಿ ಪುರುಷರ ನೇಮೋತ್ಸವ ನಡೆಸಲಾಯಿತು. ಸುಕುಮಾರ್ ಭಟ್ ಬೈಕಲ ತನ್ನ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ನೆರೆದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು.

Brama Baidarkala Borivali Nema-7

Brama Baidarkala Borivali Nema-6

Brama Baidarkala Borivali Nema-B1

ನೇಮೋತ್ಸವದಲ್ಲಿ ದೇವಿಪಾತ್ರಿಯಾಗಿ ಪ್ರಸಾದ್ ಕಲ್ಯ (ಮುಲುಂಡ್), ಮಧ್ಯಾಸ್ಥರಾಗಿ ನರ್ಸಪ್ಪ ಕೆ.ಮಾರ್ನಾಡ್, ಬೈದರ್ಕಳರ ಪೂಜಾರಿಗಳಾಗಿ ಕೋಟಿ ಪೂಜಾರಿ ಸೂಡಾ ಗರಡಿ ಮತ್ತು ರವಿ ಪೂಜಾರಿ ಕುರ್ಕಾಲ್ ಗರಡಿ ಹಾಗೂ ನರಸಿಂಹ ಪರವ ಮತ್ತು ಬೂಬ ಪರವ ಕೋಲ ನೇರವೇರಿಸಿದರು. ಗುರುವಾರ ಮುಂಜಾನೆ ಮಂಗಳದೊಂದಿಗೆ ವಾರ್ಷಿಕ ನೇಮೋತ್ಸವ ಸಮಾಪನ ಗೊಂಡಿತು.Brama Baidarkala Borivali Nema-33

Brama Baidarkala Borivali Nema-A2

Brama Baidarkala Borivali Nema-B2

ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷ ಲಕ್ಷ್ಮಣ ಬಿ.ಬೆಳುವಾಯಿ, ಜೊತೆ ಕಾರ್ಯದರ್ಶಿ ಸದಾಶಿವ ಡಿ.ಸಾಲ್ಯಾನ್, ಜೊತೆ ಕೋಶಾಧಿಕಾರಿ ದಿನೇಶ್ ಆರ್.ಶೆಟ್ಟಿ, ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರುಗಳಾದ ನರ್ಸಪ್ಪ ಕೆ.ಮಾರ್ನಾ ಡ್, ದಯಾನಂದ್ ಪೂಜಾರಿ ವಾರಂಗ, ಕಾರ್ಯದರ್ಶಿ ಜಯರಾಮ ಎಸ್.ಪೂಜಾರಿ, ಸದಸ್ಯರುಗಳಾದ ಮಹಾಬಲ ಉದ್ಯಾವರ, ದಾಮೋದರ ಪುತ್ರನ್, ಪಾರುಪತ್ಯಗಾರರುಗಳಾದ ವಿಶ್ವನಾಥ ಬಿ.ಬಂಗೇರ, ವ್ಯವಸ್ಥಾಪಕ ರುಗಳಾದ ಮರಿಯಣ್ಣ ಎನ್.ಹೆಗ್ಡೆ, ಲಕ್ಷ್ಮಣ ಎಸ್.ಸಾಲ್ಯಾನ್, ಭೋಜ ಎ.ಮೆಂಡನ್, ವಿಠಲ್ ಹೆಚ್. ಪೂಜಾರಿ, ವಿಶ್ವನಾಥ್ ಸಾಲ್ಯಾನ್, ಶೇಖರ್ ಕುಕ್ಕುಜೆ, ಸುರೇಂದ್ರ ಎಸ್.ಕೋಟ್ಯಾನ್, ಜಯ ಕೆ. ಪೂಜಾರಿ, ಭೋಜ ಪೂಜಾರಿ, ರವಿ ಕರ್ಕೇರ, ರಮಾನಾಥ ಪೂಜಾರಿ, ಸಚಿನ್ ಸಾಲ್ಯಾನ್ ಉಪಸ್ಥಿತರಿದ್ದರು.

Brama Baidarkala Borivali Nema-A1

Brama Baidarkala Borivali Nema-A4

Brama Baidarkala Borivali Nema-B5

ವಾರ್ಷಿಕ ನೇಮೋತ್ಸವದಲ್ಲಿ ಸ್ಥಾನೀಯ ನಗರ ಸೇವಕ, ಎಂಎನ್‍ಎಸ್ ಮುಖ್ಯಸ್ಥ ಚೇತನ್ ಕದಂ, ಕಾಂಗ್ರೇಸ್ ನೇತಾರ ಕಮಲೇಶ್ ಶೆಟ್ಟಿ, ಸಮಾಜ ಸೇವಕರುಗಳಾದ ನಿಟ್ಟೆ ದಾಮೋದರ ಆಚಾರ್ಯ, ಕೃಷ್ಣ ಆಚಾರ್ಯ, ಪ್ರೇಮನಾಥ್ ಕೋಟ್ಯಾನ್, ಮೋಹನ್ ಅವಿೂನ್, ರಂಗಕರ್ಮಿ ಕರುಣಾಕರ್ ಕಾಪು ಸೇರಿದಂತೆ ಮಹಾನಗರದಲ್ಲಿನ ನೂರಾರು ತುಳುನಾಡ ಭಕ್ತಾಧಿಗಳು ಆಗಮಿಸಿ ಶ್ರೀ ಜಗಧೀಶ್ವರಿ ಮತ್ತು ಶ್ರೀ ಬ್ರಹ್ಮ ಬೈದರ್ಕಳರ ಕೃಪೆಗೆ ಪಾತ್ರರಾದರು.

Brama Baidarkala Borivali Nema-25

Brama Baidarkala Borivali Nema-A3

Brama Baidarkala Borivali Nema-B7

ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಸೇವಾದಳವು ದಳಪತಿ ಗಣೇಶ್ ಕೆ.ಪೂಜಾರಿ ನೇತೃತ್ವದಲ್ಲಿ ಸ್ವಯಂಸೇವಾ ಸೇವೆಯನ್ನಿತ್ತರು. ಅಧ್ಯಕ್ಷ ಶೇಖರ್ ಇಂದು ಸಾಲಿಯಾನ್ ಸರ್ವರಿಗೂ ಪ್ರಸಾದ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು. ಸಮಿತಿಯ ಗೌ| ಪ್ರ| ಕಾರ್ಯದರ್ಶಿ ವಿಶ್ವನಾಥ ಬಿ.ಬಂಗೇರ ಸ್ವಾಗತಿಸಿದರು. ಗೌ| ಕೋಶಾಧಿಕಾರಿ ರಘು ಕೆ.ಕೋಟ್ಯಾನ್ ವಂದಿಸಿದರು.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

By suddi9

Leave a Reply

Your email address will not be published. Required fields are marked *