ಬಜಪೆ : ಗಂಜಿಮಠ ಕೈಗಾರಿಕಾ ವಲಯ (ಐಟಿ ಪಾಕರ್್) ಬಳಿ ಬೈಕೊಂದು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.

10vm Accident

10vm Accident (1)

10vm Accident (2)
ಮೃತ ಯುವಕನನ್ನು ಕಾಸರಗೋಡು ಮೂಲದ ಗಗನ್ ದೀಪ್ (23) ಎಂದು ಗುರುತಿಸಲಾಗಿದೆ. ಗಗನ್ ದೀಪ್ ಗಂಜಿಮಠದಲ್ಲಿನ ಫ್ಯಾಬ್ರಿಕ್ಸ್ ಕಂಪೆನಿಯೊಂದರ ನೌಕರ. ಮಿತ್ರರ ಜತೆ ಪಾಟರ್ಿ ಮುಗಿಸಿ ತೆರಳುವ ವೇಳೆ ಅತಿ ವೇಗದಲ್ಲಿದ್ದ ಬೈಕ್ ಡಿವೈಡರ್ಗೆ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು ಯುವಕ ಸ್ಥಳದಲ್ಲೆ ಮೃತ ಪಟ್ಟಿದ್ದಾನೆನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿ ದೂರಕ್ಕೆ ಎಸೆಯಲ್ಪಟ್ಟಿದೆ. ಸುಮಾರು ಒಂದು ಗಂಟೆಯ ಬಳಿಕ ಸ್ಥಳೀಯರು ಗಮನಿಸಿ ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದು ಪ್ರಕರಣ ದಾಖಲಾಗಿದೆ.

 

By suddi9

Leave a Reply

Your email address will not be published. Required fields are marked *