ಮುಂಬಯಿ: ಕಳೆದ ಶನಿವಾರ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯವು ಸಾಂತಾಕ್ರೂಜ್ ಪೂರ್ವದ ಕಲಿನಾ ಕ್ಯಾಂಪಸ್‍ನಲ್ಲಿರುವ ರಾನಡೆ ಭವನದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸದಸ್ಯರೂ, ನಾಡಿನ ಹೆಸರಾಂತ ಚಿತ್ರಕಲಾ ಕಲಾವಿದರಾದ ಜಯ್ ಸಿ. ಸಾಲ್ಯಾನ್ ರೇಖಾಚಿತ್ರವಾಗಿ ರಚಿಸಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರ ಭಾವಚಿತ್ರವನ್ನು ಡಾ| ಉಪಾಧ್ಯ ಅವರಿಗೆ ಉಡುಗೊರೆಯಾಗಿ ಹಸ್ತಾಂತರಿಸಿ ಅಭಿವಂದಿಸಿದರು.

sahitya

s 2

ಅತೀ ಸುಂದರವಾಗಿ ರಚಿತ ಭಾವಚಿತ್ರವನ್ನು ಕಾರ್ಯಕ್ರಮದಲ್ಲಿ ಉಪಸ್ಥಿತ ಕನ್ನಡ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ಅವರು ಉಪಾಧ್ಯರಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಎಸ್.ಎನ್ ಉಡುಪ ಜೆರಿಮೆರಿ, ಡಾ| ಜಿ.ವಿ ಕುಲ್ಕರ್ಣಿ, ಎಲ್ಲೂರು ಮಧುಸೂದನ್ ರಾವ್, ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

s 3

ಅಭಿಭಜಿತ ಉಡುಪಿ ಜಿಲ್ಲೆಯ ಮೂಲ್ಕಿ ಪಕ್ಷಿಕೆರೆ ಅಲ್ಲಿನ ತಿಣಪಯ್ಯ ನಿವಾಸಿ ಆಗಿರುವ ಜಯ್ ಸಾಲ್ಯಾನ್ ಎಂಎಸ್ಸಿ ಪದವೀಧರನಾಗಿದ್ದು ಆರ್ಟ್ಸ್‍ನಲ್ಲಿ ಡಿಪ್ಲೊಮಾ, ಫೈನ್ ಆರ್ಟ್ಸ್, ಕಮರ್ಷಿಯಲ್ ಆರ್ಟ್ಸ್ ಇತ್ಯಾದಿ ಅನೇಕ ವಿಷಯಗಳಿಂದ ಪರಿಣತರಾಗಿದ್ದರೆ. ಮೈಸೂರುನ ಕಾಲೇಜ್‍ವ್‍ಂದರಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಾಹಿಸುವ ಸಾಲ್ಯಾನ್ ಸದ್ಯ ಮಹಾನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಪೊವಾಯಿ ಚಾಂದಿವಿಲಿ ಅಲ್ಲಿನ ಪವಾರ್ ಕಾಲೇಜ್‍ನಲ್ಲಿ ಆರ್ಟ್, ಕ್ರಾಫ್ಟ್ ಮತ್ತು ಎನಿಮೇಶನ್ ವಿಭಾಗದ ಮುಖ್ಯಸ್ಥನಾಗಿ ಶ್ರಮಿಸುತ್ತಿದ್ದಾರೆ. ಲೈನ್‍ಡ್ರಾಯಿಂಗ್, ರ್ಯಾಪಿಡ್ ಸ್ಕೆಚಸ್, ಆಯಿಲ್, ಪೆಸ್ಟಲ್ ಕಲರ್, ಆಕ್ರಾಲಿಕ್, ಪೆನ್ಸಿಲ್ ಸ್ಕೆಚಸ್ ಪೈಂಟಿಂಗ್‍ನ ಪರಿಣತ ಅತ್ಯಾಧ್ಬುತ ಕಲಾವಿದ ಆಗಿದ್ದಾರೆ. ರಾಷ್ಟ್ರದ ಅನೇಕನೇಕ ಗಣ್ಯರ ಭಾವಚಿತ್ರಗಳನ್ನು ರಚಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸದ್ಯ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಎಂಎ ಪದವಿ ಓದುತ್ತಿದ್ದು ಆರ್ಟ್ಸ್‍ನಲ್ಲಿ ಪಿಹೆಚ್‍ಡಿ ನಡೆಸುವ ಆಶಯ ಹೊಂದಿದ್ದಾರೆ.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

By suddi9

Leave a Reply

Your email address will not be published. Required fields are marked *