ಬಂಟ್ವಾಳ: ಶ್ರೀ ಅನ್ನಪೂರ್ಣೇಶ್ವರಿ ಎಜ್ಯಕೇಶನ್ ಟ್ರಸ್ಟ್‍ನ ಆಶ್ರಯದಲ್ಲಿರುವ ಅಮ್ಟೂರು ಕೆದ್ಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ಜರಗಿತು.

amturu 1

ಮಂಗಳೂರು ಸಾರ್ವಜನಿಕ ಸಂಪರ್ಕ ಕರ್ನಾಟಕ ಬ್ಯಾಂಕ್‍ಪ್ರಧಾನ ಕಛೇರಿ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಅನ್ನಕ್ಕಾಗಿ ಆಂಗ್ಲ ಭಾಷೆ,ಅಭಿವ್ಯಕ್ತಿಗಾಗಿ ಕನ್ನಡ ಭಾಷೆ ಅಗತ್ಯ. ಶಾಲೆಯಿಂದ ,ನಿಸರ್ಗದಿಂದ ಶಿಕ್ಷಣ ದೊರೆಯಬೇಕು. ಬದುಕಿಗೆ ಜೀವದ್ರವ ಕೊಡುವ ಹಳ್ಳಿಗೆ ವಿಮುಖರಾಗಬೇಡಿ. ಮಗು ಮಾನವನಾಗಿ ಬೆಳೆಯಲಿ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಚ್ಛ,ಸುಂದರ ಪರಿಸರದಲ್ಲಿರುವ ಇಂತಹ ಶಾಲೆಗಳನ್ನು ಪ್ರೋತ್ಸಾಹಿಸಿ ಎಂದು ಪೋಷಕರಿಗೆ ಕರೆ ನೀಡಿದರು. ಮಾಣಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕಿರಣ್ ಹೆಗ್ಡೆ ಅನಂತಾಡಿ,ಕಲ್ಲಡ್ಕ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ,ಉದ್ಯಮಿ ಕೆ.ಮಹಮ್ಮದ್ ಮುಸ್ತಾಫ,ನಿವೃತ್ತ ಇಂಜಿನಿಯರ್ ಎಂ.ಶ್ರೀನಿವಾಸ್ ರಾವ್ ಮತ್ತಿತರರು ಉಪಸ್ಥಿತರಿದ್ದರು. ಅನ್ನಪೂರ್ಣೇಶ್ವರಿ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ.ಪರಮೇಶ್ವರ ರಾವ್ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಕೆ.ಶಶಿಕಲಾ ವರದಿ ವಾಚಿಸಿದರು. ಸಹ ಶಿಕ್ಷಕ ಸುರೇಶ್ ಜಿ.ವಂದಿಸಿದರು. ಹಿರಿಯ ವಿದ್ಯಾರ್ಥಿ ಕೆ.ಶ್ರೀಕಾಂತ ರಾವ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *