ಬಂಟ್ವಾಳ: ಮೊಡಂಕಾಪು ಇನ್‍ಫೆಂಟ್ ಜೀಸಸ್‍ಇಂಗ್ಲೀಷ್ ಮೀಡಿಯಂ ಸ್ಕೂಲ್‍ನ 8ನೇ ತರಗತಿಯ ವಿದ್ಯಾರ್ಥಿ ಜಿತೇಶ್ ಕೆ.ಅವರು ಕಮಲ್ ಮಾರ್ಷಲ್ ಆಟ್ರ್ಸ್ ಅಕಾಡೆಮಿ ಮಂಗಳೂರು ಕೆ.ಪಿ.ಟಿ. ಯಲ್ಲಿ ನಡೆಸಿದ ಕರ್ನಾಟಕ ಮತ್ತು ಕೇರಳ ಓಪನ್ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ 13 ವಯೋಮಾನದ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ 2 ಚಿನ್ನದ ಪದಕ ಗಳಿಸಿದ್ದಾರೆ. ಮಾಮೇಶ್ವರ ಸುರೇಶ್ ಕುಸುಮ ಅವರು ತರಬೇತಿ ನೀಡಿದ್ದಾರೆ.

