ಬಂಟ್ವಾಳ: ಕಲ್ಲಡ್ಕ ವಲಯದ ಬಾಬನಕಟ್ಟೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕರಿಂಕ ಇದರ ಜೀರ್ಣೋದ್ಧಾರ ಕಾರ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಪೂಜ್ಯ ಡಿ ವಿರೇಂದ್ರ ಹೆಗಡೆಯವರು ಮಂಜೂರು ಮಾಡಿದ ರೂ ಐದು ಲಕ್ಷ ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ). ಬಂಟ್ವಾಳ ದ ಯೋಜನಾಧಿಕಾರಿಯಾದ ಸುನೀತಾ ನಾಯಕ್ ಮತ್ತು ದ.ಕ.ಜಿಲ್ಲಾ ನಿರ್ದೇಶಕರಾದ ಚಂದ್ರಶೇಖರ ನೆಲ್ಯಾಡಿಯವರು ದೇವಸ್ಥಾನದ ಆಡಳಿತ ಮುಕ್ತೇಸರರಾದಂತಹ ನರೇಂದ್ರ ರೈ ಮತ್ತು ಅರ್ಚಕರಾದ ರಾಮ ಸಗ್ರಿತ್ತಾಯ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಲ್ಲಡ್ಕ ವಲಯದ ಮೇಲ್ವಿಚಾರಕರಾದಂತಹ ಶಿವಪ್ಪ ಎಂ.ಕೆ ಮತು ಸಮಿತಿ ಸದಸ್ಯರಾದಂತಹ ಲಿಂಗಪ್ಪ ಶೆಟ್ಟಿ, ಹರೀಶ್ ಪೂಜಾರಿ, ಶಶಿಕಲಾ ಕೆ,ಎನ್ ಇವರು ಉಪಸ್ಥಿತರಿದ್ದರು.

