ಬಂಟ್ವಾಳ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇಕಡಾ 44.85ರಷ್ಟು ಮತದಾನವಾಗಿದೆ. ಸೀಮಿತ ಮತದಾರರನ್ನು ಹೊಂದಿರುವ ಈ ಚುನಾವಣೆಯು ಅತ್ಯಂತ ಶಾಂತಯುತವಾಗಿ ನಡೆದಿದೆ.
ಬಂಟ್ವಾಳ ಎಪಿಎಂಸಿಗೆ ಒಟ್ಟು 50,167 ಮತದಾರರನ್ನು ಹೊಂದಿದ್ದು ಈ ಪೈಕಿ 22,497 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 16,186 ಮಂದಿ ಗಂಡಸರು ಹಾಗೂ 6,311 ಮಂದಿ ಹೆಂಗಸರು ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಬಂಟ್ವಾಳ ಎಪಿಎಂಸಿಗೆ 12 ಕ್ಷೇತ್ರಗಳನ್ನು ಹೊಂದಿದ್ದು 11 ಕೃಷಿಕರ ಕ್ಷೇತ್ರದಲ್ಲಿ 45.02 ಶೇಕಡ ಹಾಗೂ ವರ್ತಕರ ಕ್ಷೇತ್ರಕ್ಕೆ 76.84 ಶೇಕಡಾ ಮತದಾನವಾಗಿದೆ ಎಂದು ಬಂಟ್ವಾಳ ತಾಲೂಕು ಉಪ ತಹಶೀಲ್ದಾರ್ ಪರಮೇಶ್ವರ್ ನಾಯ್ಕ್ ತಿಳಿಸಿದ್ದಾರೆ.


ಶನಿವಾರ ಮತ ಎಣಿಕೆ ಕಾರ್ಯ ನಡೆಯಲಿದ್ದು ಮೊಡಂಕಾಪಿನ ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಮತ ಪೆಟ್ಟಿಗೆಯನ್ನು ಭದ್ರವಾಗಿ ಇರಿಸಲಾಗಿದೆ.


