ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ 155ನೇ ಜನ್ಮದಿನಾಚರಣೆ ಪ್ರಯುಕ್ತ ಗುರುವಾರ ನಡೆದ ಶ್ರಮದಾನ ಕಾರ್ಯಕ್ರಮ ಕಾರ್ಯಕ್ರಮಕ್ಕೆ ಸ್ವಾಮಿ ವಿವೇಕಾನಂದರ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮಾಡುವ ಚಾಲನೆ ನೀಡಲಾಯಿತು. ಶಾಲಾ ಸಂಚಾಲಕ ವಸಂತ ಮಾಧವ, ಪ್ರಮುಖರಾದ ಸತೀಶ್ ಭಟ್ ಶಿವಗಿರಿ, ಚಿತ್ತರಂಜನ್ ಹೊಸಕಟ್ಟ ಸಹಿತ ವಿದ್ಯಾರ್ಥಿಗಳು ಪಾಲ್ಗೊಂಡರು.

