ಕೈಕಂಬ: ಕೈಕಂಬದಿಂದ ಕಂದಾವರಕ್ಕೆ ಹೋಗುವ ರಸ್ತೆಯ ಬದಿಯಲ್ಲೆ ಕೊಳೆತು ನಾರುತ್ತಿರುವ ತ್ಯಾಜ್ಯಗಳು ರಾಶಿ ರಾಶಿ ಬಿದ್ದಿವೆ. ಇದರ ಪಕ್ಕದಲ್ಲಿ ಪೊಂಪೈ ಮಾತೆಯ ದ್ವಾರದಿಂದ ಸಾಗಿದರೆ ಕಂದಾವರ ಗ್ರಾ.ಪಂ, ನಾಡಕಛೇರಿ ಹಾಗೂ ಪೊಂಪೈ ಚರ್ಚ್ ಇದೆ. ಪ್ಲಾಸ್ಟಿಕ್‍ಗಳು, ಪ್ರಾಣಿಗಳ ದೇಹ ಮುಂತಾದ ತ್ಯಾಜ್ಯ ವಸ್ತುಗಳನ್ನು ತಮ್ಮ ವಾಹನದಲ್ಲಿ ತಂದು ಎಸೆಯುವುದರಿಂದ ತ್ಯಾಜ್ಯ ವಸ್ತುಗಳು ಕೊಳೆತು, ಎಲ್ಲೆಡೆ ವಾಸನೆ ಹಬ್ಬಿದೆ.
ಅಲ್ಲದೇ ಕಸದ ರಾಶಿಯನ್ನು ಕಂಡು ಎಲ್ಲಾ ಪ್ರಯಾಣಿಕರು ದೂರದ ಊರುಗಳಿಂದ ತಂದು ಇಲ್ಲಿ ತ್ಯಾಜ್ಯಗಳನ್ನು ಎಸೆಯುವ ಪರಿಣಾಮ ದನ ಕರುಗಳು ಇಲ್ಲಿ ರಾಶಿ ಬಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿನ್ನುವ ದ್ರಶ್ಯವನ್ನು ಚಿತ್ರದಲ್ಲಿ ಕಾಣಬಹುದು. ಇದರಿಂದ ನೊಂದ ಸಾರ್ವಜನಿಕರು ಪಂಚಾಯತ್‍ಗೆ ದೂರು ಸಲ್ಲಿಸಿದ್ದಾರೆ.


