ಮುಂಬಯಿ: ಮಹಾನಗರ ಮುಂಬಯಿಯಲ್ಲಿ ಕಳೆದ ಸುಮಾರು ಏಳು ದಶಕಗಳಿಂದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆಗಳಿಂದ ಅವಿರತವಾಗಿ ಕಾರ್ಯನಿರತ ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ತನ್ನ 73ನೇ ವಾರ್ಷಿಕ ಮಹಾಸಭೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ಹಳದಿ ಕುಂಕುಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇಂದಿಲ್ಲಿ ಭಾನುವಾರ ದಿನಪೂರ್ತಿ ಅಂಧೇರಿ ಪೂರ್ವದಲ್ಲಿನ ಕಾಮ್ಗಾರ್ ಕಲ್ಯಾಣ್ ಭವನದಲ್ಲಿ ಅದ್ದೂರಿಯಾಗಿ ನೇರವೇರಿಸಿತು.
ಸಂಘದ ಅಧ್ಯಕ್ಷ ರಾಜ್ಕುಮಾರ್ ಕಾರ್ನಾಡ್ ಅಧ್ಯಕ್ಷತೆಯಲ್ಲಿ ನೇರವೇರಿದ್ದ ಮಹಾಸಭೆಯಲ್ಲಿ ಉಪಾಧ್ಯಕ್ಷ ಕೆ. ಶಿವರಾಮ ರಾವ್, ಜೊತೆ ಕಾರ್ಯದರ್ಶಿಗಳಾದ ಕೇದರ್ನಾಥ ಆರ್.ಬೋಳಾರ್ ಮತ್ತು ರಿತೇಶ್ ಆರ್.ರಾವ್, ಜೊತೆ ಕೋಶಾಧಿಕಾರಿ ರೂಪೇಶ್ ಆರ್.ರಾವ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ರೀನಾ ಕೇದರ್ನಾಥ ಬೋಳಾರ್ ವೇದಿಕೆಯಲ್ಲಿ ಆಸೀನರಾಗಿದ್ದು ಗೌ| ಪ್ರ| ಕಾರ್ಯದರ್ಶಿ ಎನ್.ರವೀಂದ್ರನಾಥ್ ರಾವ್ ಸ್ವಾಗತಿಸಿ ವಾರ್ಷಿಕ ಚಟುವಟಿಕೆಗಳ ಮಾಹಿತಿಯನ್ನಿತ್ತರು ಹಾಗೂ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ನವೀನ್ ಎಸ್.ರಾವ್ ಗತ ವಾರ್ಷಿಕ ಹಣಕಾಸು ವಿವರ ಮಂಡಿಸಿದರು.
ನಾವು ಮಕ್ಕಳಲ್ಲಿ ಮಾತೃಭಾಷೆ, ಮಾತೃ ಸಂಸ್ಕೃತಿ ರೂಪಿಸಿದಾಗಲೇ ಸಮುದಾಯದ ಸರ್ವೋನ್ನತಿ ಸಾಧ್ಯ. ಸಮುದಾಯದ ಜನತೆಯ ಸಂಬಂಧಗಳಿಂದ ಸಂಸ್ಥೆಗಳು ಸಧೃಡವಾಗುವುದು. ಸಂಸ್ಥೆಗಳು ಬೆಳೆದಂತೆ ಸಮಾಜದ ಜನತೆಯಲ್ಲಿ ಏಕತೆ ಮೂಡುವುದು ಇವೆಲ್ಲವುಗಳಿಂದ ನಮ್ಮ ಆಚಾರ ವಿಚಾರ, ಸಂಸ್ಕೃತಿ, ಸಂಸ್ಕಾರ, ಸಮಾಜ ಸೇವೆ, ಧಾರ್ಮಿಕ ಸೇವೆ, ಸ್ವಸ್ಥ ಸಮಾಜ ವಿಸ್ತಾರವಾಗಿ ಬೆಳೆದು ನಮ್ಮೆಲ್ಲರ ಸಬಲೀಕರಣ ಸಾಧ್ಯವಾಗುವುದು. ಇವೆಲ್ಲವುಗಳಿಂದ ಕ್ಷತ್ರೀಯ ಸಾಮ್ರಾಜ್ಯ ನಿರ್ಮಿಸೋಣ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ರಾಜ್ಕುಮಾರ್ ಕಾರ್ನಾಡ್ ಕರೆಯಿತ್ತರು.

ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿ ಉಪಸ್ಥಿತ ರಾಮರಾಜ ಕ್ಷತ್ರೀಯ ಸಂಘದ ಅಧ್ಯಕ್ಷ ಬಿ.ಗಣಪತಿ ಶೇರ್ವೆಗಾರ್ ಅವರನ್ನು ಹಾಗೂ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿದ ಹಿರಿಯ ಸದಸ್ಯರುಗಳು, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಮಾಜ ಬಾಂಧವರು, ಪ್ರತಿಭಾನ್ವಿತರು, ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ಶುಭಾವಸರ ದಲ್ಲಿ ದಿನೇಶ್ ಎಸ್.ರಾವ್ ಪ್ರಾಯೋಜಕತ್ವದ ದಿ| ಎನ್.ಶಂಕರ್ ರಾವ್ ಮತ್ತು ದಿ| ಪುಷ್ಪ ರಾವ್ ಸ್ಮರಣಾರ್ಥ ಪುರಸ್ಕಾರ, ಸತೀಶ್ ಆರ್.ರಾವ್ ಪ್ರಾಯೋಜಕತ್ವದ ಎನ್. ರಾಮಚಂದ್ರ ರಾವ್ ಸ್ಮರಣಾರ್ಥ ವಿದ್ಯಾರ್ಥಿ ವೇತನ, ಎನ್.ರವೀಂದ್ರನಾಥ ರಾವ್ ಪ್ರಾಯೋಜಕತ್ವದ ದಿ| ಎನ್.ಈಶ್ವರ್ ರಾವ್ ಸ್ಮರಣಾರ್ಥ ವಿದ್ಯಾರ್ಥಿ ವೇತನ, ಶಿಶಿರ್ಕುಮಾರ್ ಎಸ್.ರಾವ್ ಸಹೋದರರ ಪ್ರಾಯೋಜಕತ್ವದ ದಿ| ಶಾಂಭವಿ ರಾವ್ ಮತ್ತು ಟಿ.ಕೆ ಶಿವರಾಮ ರಾವ್ ಸ್ಮರಣಾರ್ಥ ಪ್ರತಿಭಾನ್ವಿತ ವಿದ್ಯಾರ್ಥಿ ವೇತನವನ್ನು ಸೇರಿದಂತೆ ಅನೇಕ ಹೆಚ್ಚುವರಿ ಪುರಸ್ಕಾರ, ವೇತನವನ್ನೂ ಪದಾಧಿಕಾರಿಗಳು ಸಮಾಜದ ಪ್ರತಿಭಾನ್ವಿತರಿಗೆ ಪ್ರದಾನಿಸಿ ಅಭಿನಂದಿಸಿದರು.

ಅಂತೆಯೇ ಮಹಿಳಾ ಮಂಡಳಿಯ ಉಪ ಕಾರ್ಯಾಧ್ಯಕ್ಷೆ ವೀಣಾ ಎಸ್.ರಾವ್, ಕಾರ್ಯದರ್ಶಿ ಚಿತ್ರಾ ಎಂ.ರಾವ್, ಕೋಶಾಧಿಕಾರಿ ಪ್ರಜ್ಞಾ ಎಸ್.ರಾವ್, ಜೊತೆ ಕಾರ್ಯದರ್ಶಿ ಆರತಿ ಎನ್.ರಾವ್, ಜೊತೆ ಕೋಶಾಧಿಕಾರಿ ಕವಿತಾ ಆರ್.ರಾವ್ ಪದಾಧಿಕಾರಿಗಳನ್ನು ಹಿರಿಯ ಶಿಕ್ಷಕಿ ಶಶಿಕಲಾ ರಾವ್ ಪ್ರೋತ್ಸಹಕ ನುಡ್ಗಳನ್ನಾಡಿ ಪುಷ್ಫಗುಪ್ಚವನ್ನಿತ್ತು ಶುಭಾರೈಸಿದರು.

ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ರಾಜೇಂದ್ರ ರಾವ್, ಮನೋಜ್ ಸಿ.ರಾವ್, ಸಂತೋಷ್ ಕುಮಾರ್ ರಾವ್, ನಾರಾಯಣ ಯು.ರಾವ್, ಧನಂಜಯ ಎನ್.ಶೇರ್ವಿಗಾರ್, ಅಶೋಕ್ ಕುಮಾರ್ ಎಸ್.ರಾವ್, ಜನಾರ್ಧನ ಸಿ.ಶೇರ್ವೆಗಾರ್, ನಿತ್ಯಾನಂದ ಸಿ.ರಾವ್ ಸೇರಿದಂತೆ ನೂರಾರು ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದು, ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ಮಹಿಳಾ ವಿಭಾಗದಿಂದ ಭಜನೆ, ಹಳದಿ ಕುಂಕುಮ ಕಾರ್ಯಕ್ರಮಗಳು ನೇರವೇರಿಸಲ್ಪಟ್ಟವು. ವಿದ್ವಾನ್ ಶ್ರೀ ಕೆ.ರಾಮಚಂದ್ರ ಉಪದ್ಯಾಯ ಪೂಜಾಧಿಗಳನ್ನು ವೈಧಿಕವಾಗಿ ನೆರವೇರಿಸಿ ತೀರ್ಥ ಪ್ರಸಾದವನ್ನೀಡಿ ಹರಸಿದರು. ಅಕ್ಷಯ್ ರಾವ್ ಮತ್ತು ದಿವ್ಯಾ ಅಕ್ಷಯ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಮಾಜದ ಸದಸ್ಯರು ಹಾಗೂ ಮಕ್ಕಳಿಗೆ ಒಳಾಂಗಣ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಸ್ಥೆಯ ಸದಸ್ಯರು ಮತ್ತು ಮಕ್ಕಳು ಸಂಗೀತ, ವೈವಿಧ್ಯಮಯ ನೃತ್ಯಾವಳಿ ಮತ್ತು ಹಾಗೂ ವಿನೋದವಳಿ ಕಾರ್ಯಕ್ರಮವಳನ್ನು ಪ್ರಸ್ತುತ ಪಡಿಸಿದರು. ಸಭೆಯ ಆದಿಯಲ್ಲಿ ಗತ ವಾರ್ಷಿಕ ಸಾಲಿನಲ್ಲಿ ಅಗಲಿದ ಸಂಸ್ಥೆಯ ಸದಸ್ಯರು, ಸಮಾಜ ಬಂಧುಗಳು, ಗಣ್ಯರಿಗೆ ಶ್ರದ್ಧಾಂಜಲಿ ಕೋರಲಾಯಿತು. ಪ್ರಜ್ಞಾ ಸುಹಾಸ್ ರಾವ್ ಪ್ರಾರ್ಥನೆಯನ್ನಾಡಿದರು. ಕೆ.ವಿ ಹೆಗ್ಡೆ ಮತ್ತು ಪ್ರಕಾಶ್ ಎಸ್.ರಾವ್ ಸಭಿಕರ ಪರವಾಗಿ ಮಾತನಾಡಿ ಸಂಸ್ಥೆಯ ಸೇವೆಯನ್ನು ಪ್ರಶಂಸಿಸಿ ತಮ್ಮ ಸಲಹೆಗಳನ್ನಿತ್ತರು. ಅನುಪಮಾ ಗುಲ್ವಾಡಿ ಅತಿಥಿ ಪರಿಚಯ ಗೈದರು. ಕೀರ್ತನಾ ಆರ್.ರಾವ್ ಅಭಾರ ಮನ್ನಿಸಿದರು.
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)


